ಬಿಬಿಎಂಪಿಯಿಂದ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 22,000 ಪೌರಕಾರ್ಮಿಕ ಹುದ್ದೆಗಳ- ಸಂಪೂರ್ಣ ಮಾಹಿತಿ :
ಕರ್ನಾಟಕ ಸರ್ಕಾರದ ನಗರ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ 300ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ (urban local bodies-ULBS) ಪೌರಕಾರ್ಮಿಕರು, ಲೋಡರ್ಗಳು, ಕ್ಲೀನರ್ ಗಳು,ಹಾಗೂ ಸಂಬಂಧಿತ ಹುದ್ದೆಗಳಲ್ಲಿ ಸುಮಾರು 22 ಸಾವಿರ ಹುದ್ದೆಗಳು ಖಾಲಿ ಇವೆ, ಎಂದು ಸರ್ಕಾರವು ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹುದ್ದೆಗಳು ಬಿಬಿಎಂಪಿಯನ್ನು (ಅಂದಿನ BBMP )ಹೊರತುಪಡಿಸಿ ರಾಜ್ಯದ ವಿವಿಧ ನಗರ ಪಾಲಿಕೆ ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇವೆ.
ಯಾವ ಯಾವ ಹುದ್ದೆಗಳು ಖಾಲಿ ಇವೆ?
- ಪೌರಕಾರ್ಮಿಕ
- ಲೋಡರ್
- ಕ್ಲೀನರ್
- ಯುಜಿಡಿ ಸಹಾಯಕ
- ಸಹಾಯಕ
- ಕಸ ಸಂಗ್ರಹಣೆ ಸಿಬ್ಬಂದಿ
BBMP ಕೆಲಸದ ಸ್ವರೂಪ:
- ರಸ್ತೆ ಸ್ವಚ್ಛತೆ
- ಕಸ ಸಂಗ್ರಹಣೆ
- ಮನೆ ಮನೆಗೆ ಕಸ ವಿಲೇವಾರಿ
- ಚರಂಡಿ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ
- ಘನ ತ್ಯಾಜ್ಯ ವಿಂಗಡಣೆ
ಯಾವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ?
ಈ ನೇಮಕಾತಿಗಳು ರಾಜ್ಯದ 300ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯಲಿದ್ದು, ಅವುಗಳಲ್ಲಿ:
- ನಗರ ಮಹಾನಗರ ಪಾಲಿಕೆಗಳು
- ನಗರಸಭೆಗಳು
- ಪುರಸಭೆಗಳು
- ಪಟ್ಟಣ ಪಂಚಾಯಿತಿಗಳು ಸೇರಿವೆ.
ಪೌರಕಾರ್ಮಿಕರ ಹುದ್ದೆಗಳ ಜಿಲ್ಲಾವಾರು ಖಾಲಿ ಹುದ್ದೆಗಳ ಸಂಖ್ಯೆ
- ಬೆಳಗಾವಿ – 1,741
- ಬಾಗಲಕೋಟೆ – 1,201
- ಬೆಂಗಳೂರು ನಗರ – 1,017
- ಕೋಲಾರ – 1,004
- ಉತ್ತರ ಕನ್ನಡ – 1,001
- ಮೈಸೂರು – 991
- ದಕ್ಷಿಣ ಕನ್ನಡ – 961
- ರಾಯಚೂರು – 890
- ಬೀದರ್ – 886
- ಚಿಕ್ಕಬಳ್ಳಾಪುರ – 773
- ಗದಗ – 754
- ಶಿವಮೊಗ್ಗ – 720
- ಚಿತ್ರದುರ್ಗ – 710
- ಮಂಡ್ಯ – 684
- ಹಾಸನ – 675
- ಹಾವೇರಿ – 674
- ಕೊಪ್ಪಳ – 665
- ವಿಜಯನಗರ – 635
- ಯಾದಗಿರಿ – 616
- ಕಲಬುರಗಿ – 612
- ರಾಮನಗರ – 611
- ವಿಜಯಪುರ – 597
- ತುಮಕೂರು – 583
- ಬೆಂಗಳೂರು ಗ್ರಾಮಾಂತರ – 581
- ಬಳ್ಳಾರಿ – 571
- ಉಡುಪಿ – 516
- ಚಿಕ್ಕಮಗಳೂರು – 483
- ಚಾಮರಾಜನಗರ – 399
- ದಾವಣಗೆರೆ – 337
- ಕೊಡಗು – 266
- ಧಾರವಾಡ – 169
ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ವೇತನ:
ನೇಮಕಾತಿ ನಡೆಯುವ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರದ ನಿಯಮಾವಳಿಯ ಪ್ರಕಾರ ವೇತನ ಬದಲಾಗುತ್ತದೆ.
ಉದಾಹರಣೆಗೆ :
ಮಾಸಿಕ ವೇತನ: ₹17,000 ರಿಂದ ₹28,000 =(ಅಥವಾ ಸರ್ಕಾರದ ಈಗಿನ ಚಾಲ್ತಿಯ ವೇತನ ಶ್ರೇಣಿ)
- ಪಿಎಫ್ (PF)
- ಇಎಸ್ಐ(ESI)
ಸರ್ಕಾರದ ನಿಯಮಾನುಸಾರ ಇತರೆ ಸೌಲಭ್ಯಗಳು.
ಪೌರಕಾರ್ಮಿಕರ ಹುದ್ದೆಗಳ ವಿದ್ಯಾರ್ಹತೆ :
- ಹಲವಾರು ಪೌರಕಾರ್ಮಿಕ ಹುದ್ದೆಗಳಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸಿಲ್ಲ.
- ಕನ್ನಡ ಮಾತನಾಡುವ ಸಾಮರ್ಥ್ಯ ಅಗತ್ಯವಾಗಿರುತ್ತದೆ
- ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕ/ ಲೋಡರ್/ ಕ್ಲೀನರ್ ಆಗಿ ಕೆಲಸ ಮಾಡಿದ ಅನುಭವಕ್ಕೆ ಸಾಧ್ಯತೆ ನೀಡಬಹುದು.
BBMP ಕಾರ್ಮಿಕರ ವಯೋಮಿತಿ:
ಅಧಿಕೃತ ಅಧಿಸೂಚನೆ ಪ್ರಕಾರ ಜಿಲ್ಲೆ ಹಾಗೂ ನೇಮಕಾತಿಗೆ ಅನುಗುಣವಾಗಿ ವಯೋಮಿತಿ ಮತ್ತು ಮೀಸಲಾತಿ ಸಡಿಲಕ್ಕೆ ಅನ್ವಯವಾಗುತ್ತದೆ.
ಆಯ್ಕೆ ವಿಧಾನ:
- ದಾಖಲೆಗಳ ಪರಿಶೀಲನೆ
- ಅರ್ಹತೆ ಮತ್ತು ಅನುಭವದ ಪರಿಶೀಲನೆ
- ಸರ್ಕಾರದ ಮೀಸಲಾತಿ ನಿಯಮಗಳ ಅನುಸಾರವಾಗಿ
ಕೆಲವು ನೇಮಕಾತಿಗಳಲ್ಲಿ ನೇರ ಆಯ್ಕೆ :
- ಅಗತ್ಯ ದಾಖಲೆಗಳು :
- ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ )
- ಜನನ ಮತ್ತು ವಯಸ್ಸಿನ ದಾಖಲೆ
- ಅನುಭವ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಖಾತೆ ವಿವರ
BBMP ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ :
ಬಹುತೇಕ ಜಿಲ್ಲೆಗಳಲ್ಲಿ ಆಫ್ ಲೈನ್ ಮೂಲಕ ಸಂಬಂಧಿತ ನಗರಸಭೆ, ಪುರಸಭೆ ಅಥವಾ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕದಲ್ಲಿ ಸ್ವೀಕರಿಸಲಾಗುತ್ತದೆ.
ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರತ್ಯೇಕ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಿವೆ.
ಉದಾಹರಣೆಗೆ :
ಚಿಕ್ಕ ಬಳ್ಳಾಪುರ -169 ಹುದ್ದೆಗಳು
ತುಮಕೂರು ಜಿಲ್ಲೆ- 238 ಹುದ್ದೆಗಳು
ವಿಜಯಪುರ ನಗರ ಪಾಲಿಕೆ – 118 ಹುದ್ದೆಗಳು
ಅರ್ಜಿ ಪ್ರಾರಂಭ: 10 ಜೂನ್ 2026
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15 ಜುಲೈ 2026.
ಈ ನೇಮಕಾತಿ ಅಭಿಯಾನವು ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ಕೈಗೊಳ್ಳಲಾಗಿದ್ದು, ಜಿಲ್ಲೆಯವಾರು ಅಧಿಸೂಚನೆಗಳು ಪ್ರಕಟವಾದಂತೆ ಅರ್ಜಿ ದಿನಾಂಕ, ಕೊನೆಯ ದಿನಾಂಕ ಹಾಗೂ ಹುದ್ದೆಗಳ ವಿವರಗಳು ಬದಲಾಗಬಹುದು. ಆದ್ದರಿಂದ ಸಂಬಂಧಿತ ಜಿಲ್ಲೆ ಅಥವಾ ನಗರ ಸ್ಥಳೀಯ ಸಂಸ್ಥೆಯ ಅಧಿಕೃತ ಪ್ರಕಟಣೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಸೂಕ್ತ.
https://kannadainfo24.com
Read more