Bidadi township ವಿವಾದಕ್ಕೆ ಕುಮಾರಸ್ವಾಮಿ ಆಕ್ರೋಶ
ಸಂಪೂರ್ಣ ಮಾಹಿತಿ :
ಕರ್ನಾಟಕ ರಾಜಕೀಯದಲ್ಲಿ ಇತ್ತೀಚಿಗೆ ಚರ್ಚೆಗೆ ಕಾರಣವಾಗಿರುವ ವಿಷಯದಲ್ಲಿ ಬಿಡದಿ ಟ್ಟೌನುಶಿಪ್ ಮಾಡುವುದು ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ವಿವಾದವು ರೈತರು, ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ನಡುವೆ ದೊಡ್ಡ ಚರ್ಚೆಯಾಗಿ ಬೆಳೆಯುತ್ತಿದೆ.
Bidadi township ಯೋಜನೆ ಎಂದರೇನು?
ಬಿಡದಿ ಪ್ರದೇಶವನ್ನು ಬೇರೆ ದೇಶಗಳ ತರಹ ಆಧುನಿಕ ನಗರವನ್ನಾಗಿ ಅಭಿವೃದ್ದಿ ಪಡಿಸುವ ಯೋಜನೆಯಾಗಿದೆ. ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಯೋಚನೆಯನ್ನು ನಿರೂಪಿಸಲಾಗಿದೆ. ಯೋಜನೆ ಅಡಿ ಪ್ರದೇಶಗಳು, ವಾಣಿಜ್ಯ ಸಂಕೀರ್ಣಗಳು ರಸ್ತೆಗಳು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಸರ್ಕಾರದ ಪ್ರಕಾರ ಈ ಯೋಜನೆಗೆ ಅಭಿವೃದ್ಧಿ ನೆರವಾಗಲಿದ್ದು ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಸಹಕಾರ ಆಗಲಿದೆ.
ಕುಮಾರಸ್ವಾಮಿಯವರ ಆಕ್ರೋಶ:
ಈ ಯೋಜನೆಗೆ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
ವರದಿಗಳ ಪ್ರಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಸುಮಾರು 7,800 ಕು ಹೆಚ್ಚು ಎತ್ತರ ಪ್ರದೇಶವನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 3 ಗ್ರಾಮಗಳ 518 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ, ಇದರಿಂದಾಗಿ ಕುಮಾರಸ್ವಾಮಿಯವರು ಫಲವತ್ತಾದ ಕೃಷಿ ಭೂಮಿಯನ್ನು ಜನರಿಂದ ಸರ್ಕಾರವು ವಶಪಡಿಸಿಕೊಳ್ಳುತ್ತಿದೆ.
- ರೈತರ ಜೀವನಕ್ಕೆ ಧಕ್ಕೆ ಆಗಲಿದೆ
- ಈ ಯೋಜನೆ ರಿಯಲ್ ಎಸ್ಟೇಟ್ ಹಿತ ಶಕ್ತಿಗಾಗಿ ನಿಯೋಜಿಸಲಾಗಿದ
- ರೈತರಿಗೆ ಸಮರ್ಪಕ ಪರಿಹಾರ ಸರ್ಕಾರ ನೀಡುತ್ತಿಲ್ಲ
- ಟೌನ್‌ಶಿಪ್ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ರೈತರಿಗೆ ಅನ್ಯಾಯವಾಗಬಾರದು ಎಂದು ಅವರು ಹೇಳಿದ್ದಾರೆ.
- ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಹಾಗೂ ಭೂಮಿಯ ಮಾಲೀಕರಿಗೆ ನ್ಯಾಯಯುತ ಪರಿಹಾರ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.
- ರಾಜಕೀಯ ಪ್ರೇರಿತ ಯೋಜನೆ ಎಂಬ ಆರೋಪ
ಕೆಲವು ಸಂದರ್ಭಗಳಲ್ಲಿ ಈ ಯೋಜನೆ ರಾಜಕೀಯ ಉದ್ದೇಶದಿಂದ ಮುಂದಕ್ಕೆ ತರಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸರ್ಕಾರದ ಸ್ಪಷ್ಟನೆ ಅಗತ್ಯ
ರಾಜ್ಯ ಸರ್ಕಾರ ಯೋಜನೆಯ ಉದ್ದೇಶ, ವ್ಯಾಪ್ತಿ ಮತ್ತು ರೈತರಿಗೆ ಆಗುವ ಪರಿಣಾಮಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ, ಇದು ಕುಮಾರಸ್ವಾಮಿ ಅವರ ಆಕ್ರೋಶ, ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ “ಒಂದು ಇಂಚು ಭೂಮಿಯನ್ನು ಕೊಡಬೇಡಿ, ರೈತರೊಂದಿಗೆ ನಾನು ಇದ್ದೇನೆ” ಎಂದು ಹೇಳಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಪ್ರಕಾರ ಈ ಯೋಜನೆ ಅಭಿವೃದ್ಧಿಗೆ ನೆರವಾಗಲಿದ್ದು ಉದ್ಯೋಗ ಸೃಷ್ಟಿ ಹಾಗು ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರ ಆಗಲಿದೆ, ಆದರೆ ಭೂಮಿಯ ವಾರಸು ದಾರರು ತಮ್ಮ ಭೂಮಿಯನ್ನು ಸರ್ಕಾರಿ ಬಿಟ್ಟುಕೊಡಲು ಸ್ವಲ್ಪವೂ ಮನಸ್ಸು ಇಲ್ಲ.
ನಾವು ಪ್ರಾಣವನ್ನು ನೀಡುತ್ತೇವೆ ಹೊರತು ತಮ್ಮ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಇದಕ್ಕೆ ಕುಮಾರಸ್ವಾಮಿ ಅವರು ಕೂಡ ಬೆಂಬಲ ಸೂಚಿಸಿದ್ದಾರೆ.
Bidadi township ಬಗ್ಗೆ ಡಿಕೆ ಶಿವಕುಮಾರ್ ಅವರ ಅಭಿಪ್ರಾಯವೇನು?
ಡಿಕೆ ಶಿವಕುಮಾರ್ ಅವರು ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ ಶಿಪ್ or Ai city ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ಯೋಜನೆಯಲ್ಲಿ 7,000 -7,500 ಎಕರೆ ಭೂಮಿಯನ್ನು ಆಧುನಿಕನದ ನಿರ್ಮಿಸುವ ಉದ್ದೇಶವಿದೆ.
ಡಿಕೆ ಶಿವಕುಮಾರ್ ಅವರು ಭೂಮಿಯ ಮಾಲೀಕರಿಗೆ ಅದಕ್ಕೆ ತಕ್ಕಂತೆ ಬೇಕಾದ ಪರಿಹಾರವನ್ನು ನೀಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
- ವಸತಿ ಪ್ರದೇಶಗಳು
- ಕೈಗಾರಿಕಾ ವಲಯಗಳು
- ಐ ಟಿ ಪಾರ್ಕ್
- ಶಾಲೆಗಳು
- ಆಸ್ಪತ್ರೆಗಳು
ಹಾಗೂ ಇತರೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರ ಸ್ಪಷ್ಟನೆ :
- ಇದು ನನ್ನ ಯೋಜನೆ ಅಲ್ಲ ಈ, ಈ ಹಿಂದಿನ ಸರ್ಕಾರಗಳ ಕಾಲದಲ್ಲಿಯೇ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.
- ರೈತರಿಗೆ ಪ್ರತಿ ಎಕರೆಗೆ ₹2,07 ಕೋಟಿ ಇಂದ ₹2.5 ಕೋಟಿ ತನಕ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
- ಅಭಿವೃದ್ಧಿ ಉದ್ದೇಶ Ai city ನಿರ್ಮಾಣ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಹೇಳಿದ್ದಾರೆ.
- ಡಿಕೆ ಶಿವಕುಮಾರ್ ಅವರು ಈ ಯೋಜನೆಗೆ 80% ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ✅✅👇👇👇✅✅
https://kannadainfo24.com
Read more