Telegram Join My Telegram WhatsApp Join My WhatsApp

ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ 2026

Gruha jyothi ಫಲಾನುಭವಿಗಳಿಗೆ ಬಿಗ್ ಶಾಕ್ ಮತ್ತೆ ಮರು ಅರ್ಜಿ ಕಡ್ಡಾಯ :

ಒಟ್ಟು 1,68 ಕೋಟಿ ಗೃಹಜೋತಿ ಫಲಾನುಭವಿಗಳಿಗೆ ಸರ್ಕಾರವು ಬಿಗ್ ಶಾಕ್ ನೀಡಿದೆ ಹಾಗೂ ಡಿಕೆ ಶಿವಕುಮಾರ್ ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಮುಂದೆ ಗೃಹಜೋತಿಯ ಫಲವನ್ನು ಪಡೆಯಲು, ಮರು ಅರ್ಜಿ ಸಲ್ಲಿಕೆ ಕಡ್ಡಾಯ.

ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಜೋತಿ ಒಂದು ಪ್ರಮುಖವಾದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮನೆ ಮಾಲೀಕರು ಹಾಗೂ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಅವರ ದಿನನಿತ್ಯದ ಭಾರಗಳಲ್ಲಿ ಒಂದಾದ ವಿದ್ಯುತ್ ಬಿಲ್ ಕಟ್ಟುವ ಒತ್ತಡವನ್ನು ಈ ಯೋಜನೆಯಿಂದ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ .

Gruha jyothi ಯೋಜನೆ ಎಂದರೇನು?

 

ಗೃಹ ಜ್ಯೋತಿ ಯೋಜನೆಯಲ್ಲಿ ಕರ್ನಾಟಕದ ಗೃಹಬಳಕೆ ವಿದ್ಯುತ್ ಸಂಪರ್ಕ ಹೊಂದಿರುವ ಕುಟುಂಬ ಪ್ರತಿ ತಿಂಗಳು 200  ಯೂನಿಟ್ ಉಚಿತ ವಿದ್ಯುತ್   ಯೋಜನೆಯನ್ನು ಸರ್ಕಾರವು ನೀಡುತ್ತಿದೆ. ಆದರೆ ಇದು ನೇರವಾಗಿ 200 ಯೂನಿಟ್ ಉಚಿತ ಎಂಬುದಲ್ಲ, ಕುಟುಂಬದ ಹಿಂದಿನ ಸರಾಸರಿ ಬಳಕೆಯನ್ನು ಆಧರಿಸಿ ಹೆಚ್ಚುವರಿ ಮಿತಿಯೊಂದಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ.

  1. ಉದಾಹರಣೆಗೆ : ಒಂದು ಮನೆಯ ಸರಾಸರಿ ಬಳಕೆ 100 ಯೂನಿಟ್ ಇದ್ದರೆ ಅದಕ್ಕೆ ಸುಮಾರು 10% ಹೆಚ್ಚುವರಿ ಸೇರಿಸಿ ಉಚಿತ ಮಿತಿ ನಿಗದಿಯಾಗಬಹುದು. ಈ ನೀವು ಸರ್ಕಾರದ ನಿಯಮಾನುಸಾರ ಲೆಕ್ಕಾಚಾರ ನಡೆಯುತ್ತದೆ.

Gruha jyothi ಗೆ ಅರ್ಜಿ ಸಲ್ಲಿಕೆ ಕಡ್ಡಾಯವೇ?

 

ಹೌದು: ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸದಿದ್ದರೆ ಉಚಿತ ವಿದ್ಯುತ್ ಸೌಲಭ್ಯ ಸಾಮಾನ್ಯ ಪ್ರಜೆಗಳಿಗೆ ದೊರೆಯುವುದಿಲ್ಲ.

ಈಗಾಗಲೇ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿರುವವರು ಮೂರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಆದರೆ ಸಂಖ್ಯೆ ಅಥವಾ ಇತರ ಮಾಹಿತಿಯಲ್ಲಿ ಬದಲಾವಣೆ ನವೀಕರಣ ಮಾಡಬಹುದು.

 

Gruha jyothi ಯೋಜನೆಗೆ ಯಾರ್ಯಾರು ಅರ್ಹರು?

ಪುನಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳು ಇರಬೇಕು.                                                 

  • ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
  • ಗೃಹ ಬಳಕೆಯ ವಿದ್ಯುತ್ ಸಂಪರ್ಕ ಹೊಂದಿರಬೇಕು.
  • ಒಂದು ಕುಟುಂಬಕ್ಕೆ ಒಂದು ವಿದ್ಯುತ್ ಸಂಪರ್ಕಕ್ಕೆ ಮಾತ್ರ ಸೌಲಭ್ಯ ಲಭ್ಯ.
  • ವಾಣಿಜ್ಯ ವಿದ್ಯುತ್ ಸಂಪರ್ಕಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
  • ಬಾಡಿಗೆ ಮನೆಯಲ್ಲಿ ವಾಸಿಸುವವರೂ ಅರ್ಜಿ ಸಲ್ಲಿಸಬಹುದು.

Gruha jyothi ಗೆ ಬೇಕಾಗಿರುವ  ದಾಖಲೆಗಳು:

ಗೃಹಜ್ಯೋತಿ ಯೋಜನೆಗೆ ಸಾಮಾನ್ಯವಾಗಿ ಈ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್ (RR ಸಂಖ್ಯೆ/Account ID ಇರುವ ಬಿಲ್)
  • ಮೊಬೈಲ್ ಸಂಖ್ಯೆ
  • ಮನೆ ಮಾಲೀಕರ ವಿವರಗಳು (ಅಗತ್ಯವಿದ್ದರೆ)
    ಬಾಡಿಗೆ ಒಪ್ಪಂದ ಪತ್ರ (ಕೆಲವು ಸಂದರ್ಭಗಳಲ್ಲಿ)
    ವಿಳಾಸದ ದಾಖಲೆ
  • ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ ಮತ್ತು ವಿದ್ಯುತ್ ಸಂಪರ್ಕದ RR ಸಂಖ್ಯೆ ಸರಿಯಾಗಿರಬೇಕು.
  •  ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಮೂಲಕ:

  • ಸರ್ಕಾರದ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ.
  • ಗೃಹಜ್ಯೋತಿ ಯೋಜನೆ ಆಯ್ಕೆ ಮಾಡಿ.
  • ಆಧಾರ್ ಸಂಖ್ಯೆ ನಮೂದಿಸಿ.
  • ವಿದ್ಯುತ್ ಬಿಲ್‌ನ RR ಸಂಖ್ಯೆ ನಮೂದಿಸಿ.
  • ಮೊಬೈಲ್ OTP ದೃಢೀಕರಣ ಮಾಡಿ.
    ಅರ್ಜಿ ಸಲ್ಲಿಸಿ.

Gruha jyothi ಯೋಜನೆಯ ಪ್ರಯೋಜನಗಳು :

1) ವಿದ್ಯುತ್ ವೆಚ್ಚದಲ್ಲಿ ಉಳಿತಾಯ ಆರ್ಥಿಕ  ಮಟ್ಟದಲ್ಲಿ  ಕೆಳಗಿರುವ ಕುಟುಂಬಗಳಿಗೆ ತಿಂಗಳಿಗೆ ನೂರಾರು ರೂಪಾಯಿಗಳ ವಿದ್ಯುತ್ ವೆಚ್ಚವನ್ನು ಉಳಿಸಬಹುದು.

2) ಬಡ ಹಾಗೂ ಮಧ್ಯಮ ವರ್ಗಕ್ಕೆ ಆರ್ಥಿಕವಾಗಿ  ಸಹಾಯ, ದುರ್ಬಲ ಕುಟುಂಬಗಳಿಗೆ ಯೋಜನೆಯಿಂದ ದೊಡ್ಡ ನೆರವಾಗಿದೆ.

3) ಮಹಿಳೆಯರಿಗೆ ಅನುಕೂಲ ಗೃಹ ಖರ್ಚಿನ ಒತ್ತಡ ಕಡಿಮೆಯಾಗುವುದರಿಂದ ಮಹಿಳೆಯರಿಗೆ ಆರ್ಥಿಕ ನೆರುವು ದೊರೆಯುತ್ತದೆ.

4) ಜೀವನ ಮಟ್ಟ ಸುಧಾರಣೆ ಉಚಿತ  ವಿದ್ಯುತ್ನಿಂದ ಕುಟುಂಬಗಳು ಜೀವನದ ಆರ್ಥಿಕ ವ್ಯವಸ್ಥೆ ಮಟ್ಟ ಸುಧಾರಿಸುತ್ತದೆ.

 

 Gruhajyothi ಯ ಪ್ರಮುಖ ನಿಯಮಗಳು :
  • ನಿಗದಿತ ಮಿತಿ  ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ.
  •  ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದಾಗಬಹುದು.
  •  ಒಂದೇ ಕುಟುಂಬದ ಜನರು ಬಹು ಸಂಪರ್ಕ ಸೌಲಭ್ಯ ಹೊಂದಿದ್ದರೆ ಅದು ದೊರೆಯುವುದಿಲ್ಲ, ರದ್ದಾಗಬಹುದು.

ಗಮನಿಸಬೇಕಾದ ವಿಷಯಗಳು

  • ಪ್ರತಿ ತಿಂಗಳ ವಿದ್ಯುತ್ ಬಳಕೆಯನ್ನು ಗಮನಿಸಿ.
  • ವಿದ್ಯುತ್ ಬಿಲ್‌ನ RR ಸಂಖ್ಯೆ ಸರಿಯಾಗಿದೆಯೇ ಪರಿಶೀಲಿಸಿ.
  • ಮೊಬೈಲ್ ಸಂಖ್ಯೆ ಸಕ್ರಿಯವಾಗಿರಲಿ.
  • ಅರ್ಜಿ ಸ್ಥಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ.

 

ಕೊನೆಯದಾಗಿ :

ಗೃಹಜ್ಯೋತಿ ಯೋಜನೆ ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಉಚಿತ ವಿದ್ಯುತ್ ಸೌಲಭ್ಯದ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಮಾಹಿತಿಯನ್ನು ನೀಡುವುದು ಮುಖ್ಯ. ವಿದ್ಯುತ್ ಬಳಕೆಯನ್ನು ನಿಯಂತ್ರಿತವಾಗಿ ಮಾಡಿಕೊಂಡರೆ ಕುಟುಂಬಗಳು ಹೆಚ್ಚಿನ ಉಳಿತಾಯ ಮಾಡಬಹುದು ಮತ್ತು ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.

https://kannadainfo24.com

✅✅👇👇👇✅✅

 

Leave a Comment