ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ 2026 ಬಗ್ಗೆ ಸಂಪೂರ್ಣ ವಿವರ :
ಕರ್ನಾಟಕ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ( village administrative officer-VAO) ಹುದ್ದೆಗಳು ಗ್ರಾಮ ಮಟ್ಟದ ಪ್ರಮುಖ ಸರ್ಕಾರ ಹುದ್ದೆಗಳಾಗಿವೆ. 2026 ರಲ್ಲಿ ಒಟ್ಟು 572 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ನಡೆಸುವ ನಿರೀಕ್ಷೆ ಇದೆ. ವಿವರವಾದ ಅಧಿಕೃತದ ಸೂಚನೆ 10/07/2026 ರಂದು ನೀಡಲಾಗಿದೆ.
ಹುದ್ದೆಯ ಪ್ರಮುಖ ಕರ್ತವ್ಯಗಳು :
- ಗ್ರಾಮದ ಭೂ ದಾಖಲೆಗಳು ಮತ್ತು ಕಂದಾಯ ದಾಖಲೆಗಳನ್ನು ನಿರ್ವಹಿಸುವುದು.
- ಪಹಣಿ ,ಮ್ಯುಟೇಷನ್, ಬೆಳೆ ವಿವರಗಳು ಮತ್ತು ಇತರೆ ದಾಖಲೆಗಳ ನಿರ್ವಹಣೆ.
- ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದು.
- ಆದಾಯ ಜಾತಿ ನಿವಾಸ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ.
- ಭೂ ವಿವಾದಗಳ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದು.
- ಪ್ರಕೃತಿ ವಿಕೋಪ, ಬೆಳೆ ಹಾನಿ ಮುಂತಾದ ಸಂದರ್ಭಗಳಲ್ಲಿ ವರದಿ ತಯಾರಿಸುವುದು.
- ಗ್ರಾಮಸ್ಥರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಒದಗಿಸುವುದು.
VAO ಹುದ್ದೆಗಳಿಗೆ ವಿದ್ಯಾರ್ಹತೆ :
ಮಾನ್ಯತೆ ಪಡೆದ ಮಂಡಳಿಯಿಂದ PUC/ 12ನೇ, ITI, diploma ತರಗತಿ ಗಳ ಉತ್ತೀರ್ಣ ಅಲ್ಲದೆ NIOS ವತಿಯಿಂದ ನಡೆಯುವ ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರದಲ್ಲಿ ಮಾತ್ರ ಪಿಯುಸಿಗೆ ತತ್ಸಮಾನ.
VAO ಹುದ್ದೆಗಳ ನೇಮಕಾತಿಗೆ ವಯೋಮಿತಿ :
- ಕನಿಷ್ಠ – 18 ವರ್ಷ
- ಗರಿಷ್ಠ -45 ವರ್ಷ
ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮ ಅನುಸಾರ ವಯೋ ಸಡಿಲಿಕೆ ದೊರೆಯುತ್ತದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಶುಲ್ಕ :
ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ
- ಸಾಮಾನ್ಯ ಪ್ರವರ್ಗ 5/OBC/2 ಎ/2 ಬಿ /3 ಎ/3 ಬಿ = ₹750
- SC/ ST /PWD/ ಪ್ರವರ್ಗ -1 : ₹500 ರೂ
- ವಿಶೇಷ ವಿಕಲಚೇತನ ಅಭ್ಯರ್ಥಿಗಳಿಗೆ :₹ 250 ಶುಲ್ಕ ಪಾವತಿಸಬೇಕು.
ಜಿಲ್ಲಾವಾರು ಹುದ್ದೆಗಳ ಸಂಖ್ಯೆ (572)
ಜಿಲ್ಲೆ ಹುದ್ದೆಗಳು
ಬೆಂಗಳೂರು ನಗರ 20
ಬೆಂಗಳೂರು ಗ್ರಾಮಾಂತರ 29
ಚಿತ್ರದುರ್ಗ 15
ಚಿಕ್ಕಬಳ್ಳಾಪುರ 21
ತುಮಕೂರು 50
ಶಿವಮೊಗ್ಗ 18
ಕೋಲಾರ 22
ರಾಮನಗರ 30
ಮೈಸೂರು 45
ಮಂಡ್ಯ 50
ಹಾಸನ 35
ಉಡುಪಿ 10
ದಕ್ಷಿಣ ಕನ್ನಡ 37
ಚಾಮರಾಜನಗರ 31
ಚಿಕ್ಕಮಗಳೂರು 10
ಬೆಳಗಾವಿ 48
ಬಾಗಲಕೋಟೆ 16
ಗದಗ 14
ಹಾವೇರಿ 15
ಕಲಬುರಗಿ 35
ಬೀದರ್ 16
ರಾಯಚೂರು 5
ಒಟ್ಟು – 572
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ :
- ಕನ್ನಡ ಭಾಷಾ ಪರೀಕ್ಷೆ
- ಲಿಖಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ ಪಟ್ಟಿ (kea) ನಿಯಮಗಳಂತೆ.
ಗ್ರಾಮ ಲೆಕ್ಕಾಧಿಕಾರಿ ಆಡಳಿತ ಅಧಿಕಾರಿ ಅರ್ಜಿ ಸಲ್ಲಿಕೆ ದಿನಾಂಕ :
- ಅರ್ಜಿ ಆರಂಭ ದಿನಾಂಕ :10/07/2026.
- ಅರ್ಜಿ ಕೊನೆಯ ದಿನಾಂಕ :30/07/2026. ರಂದು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
- ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ :31/07/2026.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ವೇತನ :
VAO ಅಧಿಕಾರದ ಪ್ರಕಾರ ಸುಮಾರು₹ 34,000 -₹67,000 ರವರೆಗೂ ವೇತನ ಶ್ರೇಣಿಯನ್ನು ಪಡೆಯಬಹುದು.
VAO – ಪರೀಕ್ಷೆಯ ನಿಯಮಗಳು:
ಸಾಮಾನ್ಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಪರೀಕ್ಷೆಯಲ್ಲಿ ಈ ಕೆಳಗಿನ ವಿಷಯಗಳು ಇರುತ್ತವೆ:
- ಸಾಮಾನ್ಯ ಜ್ಞಾನ (General Knowledge)
- ಕರ್ನಾಟಕ ಇತಿಹಾಸ, ಭೂಗೋಳ ಮತ್ತು ಸಂವಿಧಾನ
- ಪ್ರಚಲಿತ ವಿದ್ಯಮಾನಗಳು (Current Affairs)
- ಸಾಮಾನ್ಯ ಕನ್ನಡ
- ಸಾಮಾನ್ಯ ಇಂಗ್ಲಿಷ್
- ಮಾನಸಿಕ ಸಾಮರ್ಥ್ಯ (Mental Ability/Reasoning)
- ಮೂಲಭೂತ ಗಣಿತ (Basic Mathematics)
ಪ್ರಶ್ನೆಗಳು ಹೆಚ್ಚಾಗಿ ಬಹು ಆಯ್ಕೆ (Multiple Choice Questions – MCQs) ರೂಪದಲ್ಲಿರುತ್ತವೆ.
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಅರ್ಜಿಯನ್ನು ಬೇಗ ಸಲ್ಲಿಸಿ ತಮ್ಮ ಇಷ್ಟದ ಹುದ್ದೆಗಳನ್ನು ಪಡೆದುಕೊಳ್ಳಿ.
ಈ ಹುದ್ದೆ ಗ್ರಾಮ ಮಟ್ಟದಲ್ಲಿ ಗೌರವಯುತ ಸರ್ಕಾರಿ ಉದ್ಯೋಗವಾಗಿದ್ದು, ಭೂ ದಾಖಲೆಗಳ ನಿರ್ವಹಣೆ, ಕಂದಾಯ ಆಡಳಿತ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
https://kannadainfo24.com
Read more