Telegram Join My Telegram WhatsApp Join My WhatsApp

ಕರ್ನಾಟಕ ಹೈಕೋರ್ಟ್ ನೇಮಕಾತಿ 2026 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

 ಕರ್ನಾಟಕ ಹೈಕೋರ್ಟ್ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ  2026.

ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ :

ಜುಲೈ ತಿಂಗಳ ಮೊದಲನೇ ವಾರದಲ್ಲಿ  ಕರ್ನಾಟಕ ಸರ್ಕಾರವು  ಗ್ರೂಪ್ ಡಿ  ಹುದ್ದೆಗಳ ಬರ್ತಿಗಾಗಿ ಒಟ್ಟು 106 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ.SSLC  10ನೇ  ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರದ  ಉದ್ಯೋಗದ  ಅವಕಾಶವಾಗಿದೆ. ಉದ್ಯೋಗಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ನೇಮಕಾತಿಯಲ್ಲಿ ಬೆಂಗಳೂರು ಪ್ರಧಾನಪೀಠ ಹಾಗೂ ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ನೇಮಕಾತಿ ನಡೆಯಲಿದೆ.

 

 ಕರ್ನಾಟಕ  ಹೈಕೋರ್ಟ್ ಹುದ್ದೆಗಳ ಪ್ರಮುಖ ಮಾಹಿತಿ:

  • ಸಂಸ್ಥೆ: High Court of Karnataka
  • ಒಟ್ಟು ಹುದ್ದೆಗಳು: 106
  • ಉದ್ಯೋಗ ಸ್ಥಳ: ಕರ್ನಾಟಕ
  • ಅರ್ಜಿ ವಿಧಾನ: ಆನ್‌ಲೈನ್
  • ಶೈಕ್ಷಣಿಕ ಅರ್ಹತೆ: ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಉತ್ತೀರ್ಣ
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31 ಜುಲೈ 2026 (ರಾತ್ರಿ 11:59ರವರೆಗೆ) 

ಕರ್ನಾಟಕ  ಹೈ ಕೋರ್ಟ್ ನಲ್ಲಿ  ಖಾಲಿ   ಇರುವ  ಹುದ್ದೆಗಳು:

  •  ಜವಾನ ( ಹೌಸ್ ಕೀಪಿಂಗ್ )
  • ಪಿಯೂನ್ (Peon)
  • ವಾಚ್‌ಮನ್ (Watchman)
  • ಸ್ವೀಪರ್ (Sweeper)
  • ಹೌಸ್‌ಕೀಪಿಂಗ್ ಪಿಯೂನ್
  • ಲಿಫ್ಟ್ ಅಟೆಂಡರ್
  • ಅಸಿಸ್ಟೆಂಟ್ ಬೈಂಡರ್
  • ಟೈಲರ್
  • ಧೋಬಿ

ಒಟ್ಟು 98 ಹುದ್ದೆಗಳು ಸಾಮಾನ್ಯ (RPC) ವಿಭಾಗದಲ್ಲಿ ಹಾಗೂ 8 ಹುದ್ದೆಗಳು ಕಲ್ಯಾಣ ಕರ್ನಾಟಕ (KKR) ವಿಭಾಗದಲ್ಲಿ ಭರ್ತಿಯಾಗಲಿವೆ. ಕೆಲವು ತಾಂತ್ರಿಕ ಹುದ್ದೆಗಳಿಗೆ ಸಂಬಂಧಿತ ಕೆಲಸದ ಅನುಭವವೂ ಅಗತ್ಯವಾಗಬಹುದು.

ಹೈ ಕೋರ್ಟ್ ನ ಹುದ್ದೆಗಳಿಗೆ ಬೇಕಾದ ಪ್ರಮುಖ ಶೈಕ್ಷಣಿಕ ಅರ್ಹತೆ:

  • ಕನಿಷ್ಠ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆ.
  • ಲಿಫ್ಟ್ ಅಟೆಂಡರ್, ಟೈಲರ್, ಧೋಬಿ, ಅಸಿಸ್ಟೆಂಟ್ ಬೈಂಡರ್ ಹುದ್ದೆಗಳಿಗೆ ಸಂಬಂಧಿತ ಅನುಭವ ಅಗತ್ಯವಿರಬಹುದು.

ಹೈಕೋರ್ಟ್ ಹುದ್ದೆಗಳಿಗೆ ಬೇಕಾದ ವಯೋಮಿತಿ:

  • ಕನಿಷ್ಠ: 18 ವರ್ಷ
  • ಗರಿಷ್ಠ (ಸಾಮಾನ್ಯ): 40 ವರ್ಷ
  • OBC: 43 ವರ್ಷ
  • SC/ST/ಪ್ರವರ್ಗ–I: 45 ವರ್ಷ

ಹೈಕೋರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಜಿ ಶುಲ್ಕ :

  • ಸಾಮಾನ್ಯ ಹಾಗೂ OBC ಅಭ್ಯರ್ಥಿಗಳು – ₹200
  • SC/ST/ಪ್ರವರ್ಗ–I/ದಿವ್ಯಾಂಗ ಅಭ್ಯರ್ಥಿಗಳು – ₹100

ಹುದ್ದೆಗಳಿಗೆ ವೇತನ ಎಷ್ಟು :

ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ನಿಯಮಗಳ ಪ್ರಕಾರ ಗ್ರೂಪ್–ಡಿ ವೇತನ,

  • ತುಟ್ಟಿಭತ್ಯೆ (DA),
  • ಮನೆ ಬಾಡಿಗೆ ಭತ್ಯೆ (HRA),
  • ವೈದ್ಯಕೀಯ ಸೌಲಭ್ಯ,
  • ರಜೆ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.

 

ಹೈಕೋರ್ಟ್ ಹುದ್ದೆಗಳಿಗೆ ಆಯ್ಕೆ  ಪ್ರಕ್ರಿಯೆ

  • ಅರ್ಜಿಗಳ ಪರಿಶೀಲನೆ
  • ಅಗತ್ಯವಿದ್ದರೆ ಸಂದರ್ಶನ/ದಾಖಲೆ ಪರಿಶೀಲನೆ
  • ಅಂತಿಮ ಆಯ್ಕೆ ಪಟ್ಟಿ
  • ವೈದ್ಯಕೀಯ ಪರೀಕ್ಷೆ (ಅಗತ್ಯವಿದ್ದರೆ)

ಅಗತ್ಯ ದಾಖಲೆಗಳು

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಜನ್ಮ ದಿನಾಂಕದ ದಾಖಲೆ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ನಿವಾಸ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಅನುಭವ ಪ್ರಮಾಣಪತ್ರ (ಅನ್ವಯಿಸಿದ ಹುದ್ದೆಗಳಿಗೆ)

ಹೈ ಕೋರ್ಟ್ ಹುದ್ದೆಗಳಿಗೆ ಅರ್ಜಿ  ಸಲ್ಲಿಸುವ ವಿಧಾನ:

  • ಕರ್ನಾಟಕ ಹೈಕೋರ್ಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • Group-D Recruitment 2026 ಅಧಿಸೂಚನೆಯನ್ನು ತೆರೆಯಿರಿ.
  • ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಹಾಗೂ ಪ್ರಿಂಟ್‌ಔಟ್ ಉಳಿಸಿಕೊಳ್ಳಿ.

ಹೈಕೋರ್ಟ್  ಉದ್ಯೋಗದ ಪ್ರಯೋಜನಗಳು:

  • ಶಾಶ್ವತ ಕರ್ನಾಟಕ ಸರ್ಕಾರಿ ಉದ್ಯೋಗ
  • ಉದ್ಯೋಗ ಭದ್ರತೆ
  • ನಿಯಮಿತ ವೇತನ ಹಾಗೂ ವಾರ್ಷಿಕ ವೇತನ ಹೆಚ್ಚಳ
  • ಪಿಂಚಣಿ/ಎನ್‌ಪಿಎಸ್ ಸೌಲಭ್ಯ (ಅನ್ವಯಿಸಿದ ನಿಯಮಗಳಂತೆ)
  • ವೈದ್ಯಕೀಯ ಹಾಗೂ ರಜೆ ಸೌಲಭ್ಯಗಳು
  • ಪದೋನ್ನತಿಯ ಅವಕಾಶ
  • ಕರ್ನಾಟಕದಲ್ಲೇ ಕೆಲಸ ಮಾಡುವ ಅವಕಾಶ

ಗಮನಿಸಿ:

ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರೆ ಅರ್ಹತೆಗಳನ್ನು ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ 31 ಜುಲೈ 2026 ಆಗಿರುವುದರಿಂದ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

https://kannadainfo24.com

Read more

 

 

 

Leave a Comment