Telegram Join My Telegram WhatsApp Join My WhatsApp

ಭಾರತದ ರೈಲ್ವೆ ಇಲಾಖೆಯಲ್ಲಿ ಸೆಕ್ಷನ್ ಕಂಟ್ರೋಲರ್ ಗಳ ನೇಮಕಾತಿ ಆರಂಭ 2026.

ಭಾರತೀಯ  ರೈಲ್ವೆ ಸೆಕ್ಷನ್ ಕಂಟ್ರೋಲರ್ ನೇಮಕಾತಿ 2026 : ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2026 ರಲ್ಲಿ (Section Controller) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದು ರೈಲ್ವೆಯ ಅತ್ಯಂತ ಜವಾಬ್ದಾರಿಯುತ ಕಾರ್ಯ ಚಾರಣ ಹುದ್ದೆಗಳಲ್ಲಿ ಒಂದಾಗಿದೆ. ಈ ಹುದ್ದೆಗಳ ಹುದ್ದೆಯಲ್ಲಿ ರೈಲುಗಳ ಸುರಕ್ಷಿತ ಮತ್ತು ಸಮಯೋಚಿತ ಸಂಚಾರವನ್ನು ನಿಯಂತ್ರಿಸುವ ಜವಾಬ್ದಾರಿ ಇರುತ್ತದೆ.

 

 ರೈಲ್ವೆ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಪ್ರಮುಖ  ವಿವರಗಳು:

 

ಹುದ್ದೆ ಹೆಸರು : ಸೆಕ್ಷನ್ ಕಂಟ್ರೋಲರ್ (section controller)

ಒಟ್ಟು  ಹುದ್ದೆಗಳು:119

ವೇತನ ಮಟ್ಟ : 7ನೇ ವೇತನ ಆಯೋಗದ ಅಡಿಯಲ್ಲಿ  Level -2

 

ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಮಾಸಿಕ  ವೇತನ :

ಮೂಲವೇತನ :₹35,400 ಪ್ರತಿ ತಿಂಗಳು.

ಮೂಲ ವೇತನದ ಜೊತೆಗೆ ಕೆಳಗಿನ ಭತ್ಯೆಗಳು:

  •  ತುಟ್ಟಿ ಭತ್ಯೆ
  • ಮನೆ ಬಾಡಿಗೆ ಭತ್ಯೆ
  • ಸಾರಿಗೆ ಭತ್ಯೆ
  • ಇತರೆ ಸರ್ಕಾರಿ ಸೌಲಭ್ಯಗಳು.

ಒಟ್ಟಾರೆ ಆರಂಭಿಕ ಒಟ್ಟು ವೇತನ ಸುಮಾರು ₹50,000-₹60,000 ಅಥವಾ ಅದಕ್ಕಿಂತ ಹೆಚ್ಚು ಆಗಬಹುದು. ಪೋಸ್ಟಿಂಗ್ ಸ್ಥಳ ಮತ್ತು  ಭತ್ಯೆಗಳ  ಆಧಾರದ ಮೇಲೆ ಮೊತ್ತ ಬದಲಾಗುತ್ತದೆ.

 

 ಸೆಕ್ಷನ್ ಕಂಟ್ರೋಲರ್ ಗಳಿಗೆ ಬೇಕಾದ ವಯೋಮಿತಿ:

ಕನಿಷ್ಠ  : 20 ವರ್ಷ

ಗರಿಷ್ಠ  :  33 ವರ್ಷಕ್ಕೆ

ವಯೋ ಸಡಿಲಿಕೆ 

OBC:  3 ವರ್ಷ

SC/ST:  5 ವರ್ಷ

PwBD, ಮಾಜಿ ಸೈನಿಕರು ಹಾಗೂ ಇತರರಿಗೆ ಸರ್ಕಾರಿ ನಿಯಮಾನುಸಾರ  ಸಡಿಲಿಕೆ.

 ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಬೇಕಾದ    ವಿದ್ಯಾರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduate)ಹೊಂದಿರಬೇಕು.

 

ಅರ್ಜಿ ಶುಲ್ಕ

  • ಸಾಮಾನ್ಯ/OBC/EWS:₹500
  • SC/ST/ ಮಹಿಳೆಯರು PwBD/ ಮಾಜಿ ಸೈನಿಕರು / ಟ್ರಾನ್ಸ್ ಜೆಂಡರ್ /EBC:₹500

ಮೊದಲ ಹಂತದ ಸಿ ಬಿ ಟಿ ಪರೀಕ್ಷೆಗೆ ಹಾಜರಾದ ನಂತರ ನಿಯಮನುಸಾರ ಶುಲ್ಕದ ಮರುಪಾವತಿ  (Refund) ನೀಡಲಾಗುತ್ತದೆ.

 

 ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ  ಸಲ್ಲಿಸುವ ದಿನಾಂಕ:

  • ಅರ್ಜಿ ಆರಂಭ :15 ಜುಲೈ   2026.
  • ಅರ್ಜಿ ಕೊನೆಯ ದಿನಾಂಕ : 14 ಆಗಸ್ಟ್ 2026
  • ಶುಲ್ಕ ಪಾವತಿಯ  ಕೊನೆಯ ದಿನಾಂಕ: 16 ಆಗಸ್ಟ್ 2026.

 

 ಸೆಕ್ಷನ್ ಕಂಟ್ರೋಲರ್ ರೈಲ್ವೆ ಹುದ್ದೆಗಳಿಗೆ    ಆಯ್ಕೆ ಪ್ರಕ್ರಿಯೆ :

  • ಕಂಪ್ಯೂಟರ್ ಆಧಾರಿತ ಪರೀಕ್ಷೆ( CBT)
  • ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ (CBAT)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ A-2( ಮೆಡಿಕಲ್ ಟೆಸ್ಟ್).

 

ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಪ್ರಮುಖ ಕರ್ತವ್ಯಗಳು :

 

  • ರೈಲುಗಳ ಸಂಚಾರವನ್ನು ನಿಯಂತ್ರಿಸುವುದು
  • ರೈಲುಗಳು ಸಮಯಕ್ಕೆ ಸರಿಯಾಗಿ ಓಡಲು ಕ್ರಮ ಕೈಗೊಳ್ಳುವುದು.
  • ವಿವಿಧ ನಿಲ್ದಾಣಗಳ ಸ್ಟೇಷನ್ ಮಾಸ್ಟರ್ ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
  • ಲೋಕೋ ಪೈಲೆಟ್ ಗಳಿಗೆ ಅಗತ್ಯ ಸೂಚನೆಗಳನ್ನು ನೀಡುವುದು.
  • ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು.
  • ರೈಲು ಮಾರ್ಗಗಳಲ್ಲಿ ಸಂಚಾರದ ಸುರಕ್ಷತೆ ಕಾಪಾಡುವುದು.
  • ಅಪಘಾತ ಅಥವಾ ತಾಂತ್ರಿಕ ದೋಷ ಉಂಟಾದರೆ ರಕ್ಷಣಕಾರ್ಯಗಳನ್ನು ಸಮನ್ವಯಗೊಳಿಸುವುದು.
  • ನಿಯಂತ್ರಣ ಕೊಠಡಿ ಇಂದ 24*7 ಕಾರ್ಯಚರಣೆಯನ್ನು ಮೇಲ್ವಿಚಾರಣೆ ಮಾಡುವುದು.
  • ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡುವುದು.

 

 ಸೆಕ್ಷನ್  ಕಂಟ್ರೋಲರ್  ರೈಲ್ವೆ  ಹುದ್ದೆಗಳ  ಕೆಲಸದ ಸ್ವರೂಪ:

 

  • ಶಿಫ್ಟ್ ಡ್ಯೂಟಿ (ಹಗಲು/ ರಾತ್ರಿ).
  • ನಿಯಂತ್ರಣ ಕೊಠಡಿಯಲ್ಲಿ ಕಂಪ್ಯೂಟರ್ ಮೂಲಕ ಕಾರ್ಯನಿರ್ವಹಣೆ.
  • ಹೆಚ್ಚಿನ ಏಕಾಗ್ರತೆ ಮತ್ತು ತ್ವರಿತ ನಿರ್ಧಾರ ಸಾಮರ್ಥ್ಯ ಅಗತ್ಯ.
  • ಉತ್ತಮ ಸಂವಹನ ಕೌಶಲ್ಯ ಅಗತ್ಯ.

 

 ರೈಲ್ವೆ ಸೆಕ್ಷನ್ ಕಂಟ್ರೋಲರ್ ಗಳ  ಸೌಲಭ್ಯಗಳು:

 

  • ಕೇಂದ್ರ ಸರ್ಕಾರಿ ನೌಕರರ ಎಲ್ಲಾ ಸೌಲಭ್ಯಗಳು
  • ವೈದ್ಯಕೀಯ ಸೌಲಭ್ಯ
  • ಪಿಂಚಣಿ (ಅನ್ವಯಿಸುವ ನಿಯಮಗಳಂತೆ)
  • ರಜೆ ಸೌಲಭ್ಯ
  • ಪದೋನ್ನತಿ ಅವಕಾಶಗಳು
  • DA, HRA, TA ಸೌಲಭ್ಯಗಳು.

 

ಪದೋನ್ನತಿ

ಅನುಭವ ಮತ್ತು ಇಲಾಖಾ ನಿಯಮಗಳ ಆಧಾರದ ಮೇಲೆ ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯಬಹುದು.

ಈ ಹುದ್ದೆ ಭಾರತೀಯ ರೈಲ್ವೆಯ ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಉದ್ಯೋಗಗಳಲ್ಲಿ ಒಂದಾಗಿದ್ದು, ಉತ್ತಮ ವೇತನ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತದೆ.

https://kannadainfo24.com

Read more

 

Leave a Comment