ಕರ್ನಾಟಕ ಲೋಕಾಯುಕ್ತ ನೇಮಕಾತಿ 2026- ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳ ನೇಮಕಾತಿ ಬಗ್ಗೆ ಸಂಪೂರ್ಣ ವಿವರ:
ಕರ್ನಾಟಕ ಲೋಕಾಯುಕ್ತ ಇಲಾಖೆಯು ಗ್ರೂಪ್–ಸಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಲಭ್ಯವಿರುವ ಇತ್ತೀಚಿನ ಅಧಿಸೂಚನೆಯ ಪ್ರಕಾರ ಒಟ್ಟು 26 ಹುದ್ದೆಗಳು ಪ್ರಕಟವಾಗಿವೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿರುವ ವಿವರಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.
ಕರ್ನಾಟಕ ಲೋಕಾಯುಕ್ತದ ಪ್ರಮುಖ ಕರ್ತವ್ಯಗಳು:
- ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧದ ಭ್ರಷ್ಟಾಚಾರ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸುವುದು.
- ಲಂಚ, ಅಧಿಕಾರ ದುರುಪಯೋಗ ಅಕ್ರಮ ಆಸ್ತಿ ಸೇರಿದಂತೆ ವಿವಿಧ ಆರೋಪಗಳ ತನಿಖೆ ಮಾಡುವುದು.
- ದೋಷಿ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಶಿಸ್ತು ಕ್ರಮ ಅಥವಾ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದು.
- ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸಲು ಕಾರ್ಯನಿರ್ವಹಿಸುವುದು.
- ಸಾರ್ವಜನಿಕರಿಂದ ಬಂದ ದೂರುಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಸ್ಥಳ ಪರಿಶೀಲನೆ ಮತ್ತು ದಾಖಲೆಗಳ ಪರಿಶೀಲನೆ ನಡೆಸುವುದು.
- ಭ್ರಷ್ಟಾಚಾರ ಕಡೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು.
- ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾಕ್ಷ ಸಂಗ್ರಹಿಸಿ ಅಗತ್ಯವಿದ್ದರೆ ದಾಳಿ (ರೇಡ್) ಮತ್ತು ಬಲೆ ಬೀಸಿ (ಟ್ರ್ಯಾಪ್) ಕಾರ್ಯಾಚರಣೆ ನಡೆಸುವುದು.
- ಸರ್ಕಾರಿ ಇಲಾಖೆಗಳಲ್ಲಿ ಆಡಳಿತ ಸುಧಾರಣೆಗೆ ಅಗತ್ಯವಾದ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸುವುದು.
ಲೋಕಾಯುಕ್ತ ಇಲಾಖೆಯ ಹುದ್ದೆಯ ಹೆಸರು:
ಕ್ಲರ್ಕ್ ಕಂ ಟೈಪಿಸ್ಟ್ (Clerk-cum-Typist)
ಒಟ್ಟು ಹುದ್ದೆಗಳು:
26 ಹುದ್ದೆಗಳು
ಈ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ PUC (12ನೇ ತರಗತಿ) ಉತ್ತೀರ್ಣ ಆಗಿರಬೇಕು.
- ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ ಹೊಂದಿರುವವರಿಗೆ ಆದ್ಯತೆ.
- ಮೂಲಭೂತ ಕಂಪ್ಯೂಟರ್ ಜ್ಞಾನ ಅಗತ್ಯವಾಗಿರಬಹುದು.
- ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಅಥವಾ ತತ್ಸಮಾನ.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಅಥವಾ ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ.
ಲೋಕಾಯುಕ್ತ ಕ್ಲರ್ಕ್ ಕಮ್ ಟೈಪಿಸ್ಟ್ ಇಲಾಖೆಯ ಹುದ್ದೆಗಳಿಗೆ ಬೇಕಾದ ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು : ಸಾಮಾನ್ಯ ವರ್ಗಕ್ಕೆ ಸುಮಾರು 35 ವರ್ಷ.
- ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನಸಾರ ವಯೋ ಸಡಿಲಿಕೆ ಲಭ್ಯವಿದೆ.
ಲೋಕಾಯುಕ್ತ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಸಲ್ಲಿಸಬೇಕಾದ ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ, ಪ್ರವರ್ಗ – 2(A), (2B), (3A), 3(B) ಮತ್ತು ಮಾಜಿ ಸೈನಿಕರಿಗೆ =₹250.
- SC/ST ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
- ಅಂತಿಮ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ.
ಲೋಕಾಯುಕ್ತ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಈ ಹಂತಗಳು ಇರುತ್ತವೆ:
- ಲಿಖಿತ ಪರೀಕ್ಷೆ
- ಟೈಪಿಂಗ್ ಕೌಶಲ್ಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ಅಂತಿಮ ಆಯ್ಕೆ ಪಟ್ಟಿ
- ಡಿಪ್ಲೋಮಾದಲ್ಲಿ ಮೂರು ವರ್ಷ ಪ್ರಾಕ್ಟೀಸ್ ಮಾಡಿದರು ಸಹ ಅಪ್ಲೈ ಮಾಡಬಹುದು.
ಕ್ಲರ್ಕ್ – ಕಮ್ -ಟೈಪಿಷ್ಟ್ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳ ಪೈಕಿ 1:10 ವಿದ್ಯಾರ್ಥಿಗಳ ಅನುಪಾತದಲ್ಲಿ ಪಟ್ಟಿಯನ್ನು ತಯಾರಿಸಲಾಗುತ್ತದೆ.
ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಕೋರ್ಸ್ ಪಾಸ್ ಆಗಿದ್ದರೆ ಅರ್ಜಿ ಸಲ್ಲಿಸಬಹುದು.
ಅರ್ಹತಾ ಪಟ್ಟಿಯಲ್ಲಿ ಗರಿಷ್ಠ ಅಂಕಗಳಿಗೆ ಅಭ್ಯರ್ಥಿಯು ಶೇಕಡ 50ರಷ್ಟು ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು.
ಲೋಕಾಯುಕ್ತ ಹುದ್ದೆಯ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ನೀಡುವ ವೇತನ ಎಷ್ಟು?
- 7ನೇ ವೇತನ ಆಯೋಗದ ಪ್ರಕಾರ ಸುಮಾರು ₹34,100 ರಿಂದ ₹67,600 ಮೂಲ ವೇತನ ಶ್ರೇಣಿ.
- ಇದರ ಜೊತೆಗೆ DA, HRA, ವೈದ್ಯಕೀಯ ಹಾಗೂ ಇತರೆ ಸರ್ಕಾರಿ ಭತ್ಯೆಗಳು ದೊರೆಯುತ್ತವೆ.
ಲೋಕಾಯುಕ್ತ ಕ್ಲರ್ಕ್ ಕಮ್ ಟೈಪಿಸ್ಟ್ ಕೆಲಸಗಳ ಮುಖ್ಯ ಕರ್ತವ್ಯಗಳು:
- ಕಚೇರಿ ದಾಖಲೆಗಳ ನಿರ್ವಹಣೆ.
- ಸರ್ಕಾರಿ ಪತ್ರಗಳ ಟೈಪಿಂಗ್.
- ಫೈಲ್ ನಿರ್ವಹಣೆ ಮತ್ತು ದಾಖಲೆ ಸಂಗ್ರಹಣೆ.
- ಡೇಟಾ ಎಂಟ್ರಿ.
- ಹಿರಿಯ ಅಧಿಕಾರಿಗಳಿಗೆ ಆಡಳಿತಾತ್ಮಕ ಸಹಾಯ.
- ಕಚೇರಿಯ ದೈನಂದಿನ ಕಾರ್ಯಗಳಲ್ಲಿ ಸಹಕರಿಸುವುದು.
ಈ ಉದ್ಯೋಗದ ಪ್ರಯೋಜನಗಳು:
- ಶಾಶ್ವತ ಸರ್ಕಾರಿ ಉದ್ಯೋಗದ ಅವಕಾಶ.
- ಉತ್ತಮ ವೇತನ ಮತ್ತು ಭತ್ಯೆಗಳು.
- ಪಿಂಚಣಿ/ಎನ್‌ಪಿಎಸ್ ಸೌಲಭ್ಯ.
- ವೈದ್ಯಕೀಯ ಸೌಲಭ್ಯ.
- ರಜೆಗಳ ಸೌಲಭ್ಯ.
- ಪದೋನ್ನತಿಯ ಅವಕಾಶ.
- ಉದ್ಯೋಗ ಭದ್ರತೆ.
ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.
ಅಗತ್ಯ ದಾಖಲೆಗಳು:
- ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
- ಸಹಿ
- ಇತರೆ ಅಗತ್ಯ ದಾಖಲೆಗಳು
ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ:
- ಆನ್‌ಲೈನ್ ಅರ್ಜಿ ಆರಂಭವಾಗಿದೆ.
- ಅರ್ಜಿ ಸಲ್ಲಿಕೆಯ ಮೊದಲ ದಿನಾಂಕ :17/07/2026
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 17 ಆಗಸ್ಟ್ 2026( ರಾತ್ರಿ 12:00 ಗಂಟೆಯವರೆಗೂ ).
ಒಟ್ಟಾರೆ, ಕರ್ನಾಟಕ ಲೋಕಾಯುಕ್ತದ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು PUC ಪಾಸ್ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದ್ದು, ಉತ್ತಮ ವೇತನ, ಉದ್ಯೋಗ ಭದ್ರತೆ ಮತ್ತು ಭವಿಷ್ಯದಲ್ಲಿ ಪದೋನ್ನತಿ ಅವಕಾಶಗಳನ್ನು ಒದಗಿಸುತ್ತವೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನದಿಂದ ಓದಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.
https://kannadainfo24.com
Read more