ಭಾರತೀಯ ರೈಲ್ವೆ ಸೆಕ್ಷನ್ ಕಂಟ್ರೋಲರ್ ನೇಮಕಾತಿ 2026 : ಸಂಪೂರ್ಣ ಮಾಹಿತಿ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2026 ರಲ್ಲಿ (Section Controller) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದು ರೈಲ್ವೆಯ ಅತ್ಯಂತ ಜವಾಬ್ದಾರಿಯುತ ಕಾರ್ಯ ಚಾರಣ ಹುದ್ದೆಗಳಲ್ಲಿ ಒಂದಾಗಿದೆ. ಈ ಹುದ್ದೆಗಳ ಹುದ್ದೆಯಲ್ಲಿ ರೈಲುಗಳ ಸುರಕ್ಷಿತ ಮತ್ತು ಸಮಯೋಚಿತ ಸಂಚಾರವನ್ನು ನಿಯಂತ್ರಿಸುವ ಜವಾಬ್ದಾರಿ ಇರುತ್ತದೆ.
ರೈಲ್ವೆ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಪ್ರಮುಖ ವಿವರಗಳು:
ಹುದ್ದೆ ಹೆಸರು : ಸೆಕ್ಷನ್ ಕಂಟ್ರೋಲರ್ (section controller)
ಒಟ್ಟು ಹುದ್ದೆಗಳು:119
ವೇತನ ಮಟ್ಟ : 7ನೇ ವೇತನ ಆಯೋಗದ ಅಡಿಯಲ್ಲಿ Level -2
ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಮಾಸಿಕ ವೇತನ :
ಮೂಲವೇತನ :₹35,400 ಪ್ರತಿ ತಿಂಗಳು.
ಮೂಲ ವೇತನದ ಜೊತೆಗೆ ಕೆಳಗಿನ ಭತ್ಯೆಗಳು:
- ತುಟ್ಟಿ ಭತ್ಯೆ
- ಮನೆ ಬಾಡಿಗೆ ಭತ್ಯೆ
- ಸಾರಿಗೆ ಭತ್ಯೆ
- ಇತರೆ ಸರ್ಕಾರಿ ಸೌಲಭ್ಯಗಳು.
ಒಟ್ಟಾರೆ ಆರಂಭಿಕ ಒಟ್ಟು ವೇತನ ಸುಮಾರು ₹50,000-₹60,000 ಅಥವಾ ಅದಕ್ಕಿಂತ ಹೆಚ್ಚು ಆಗಬಹುದು. ಪೋಸ್ಟಿಂಗ್ ಸ್ಥಳ ಮತ್ತು ಭತ್ಯೆಗಳ ಆಧಾರದ ಮೇಲೆ ಮೊತ್ತ ಬದಲಾಗುತ್ತದೆ.
ಸೆಕ್ಷನ್ ಕಂಟ್ರೋಲರ್ ಗಳಿಗೆ ಬೇಕಾದ ವಯೋಮಿತಿ:
ಕನಿಷ್ಠ : 20 ವರ್ಷ
ಗರಿಷ್ಠ : 33 ವರ್ಷಕ್ಕೆ
ವಯೋ ಸಡಿಲಿಕೆ
OBC: 3 ವರ್ಷ
SC/ST: 5 ವರ್ಷ
PwBD, ಮಾಜಿ ಸೈನಿಕರು ಹಾಗೂ ಇತರರಿಗೆ ಸರ್ಕಾರಿ ನಿಯಮಾನುಸಾರ ಸಡಿಲಿಕೆ.
ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduate)ಹೊಂದಿರಬೇಕು.
ಅರ್ಜಿ ಶುಲ್ಕ
- ಸಾಮಾನ್ಯ/OBC/EWS:₹500
- SC/ST/ ಮಹಿಳೆಯರು PwBD/ ಮಾಜಿ ಸೈನಿಕರು / ಟ್ರಾನ್ಸ್ ಜೆಂಡರ್ /EBC:₹500
ಮೊದಲ ಹಂತದ ಸಿ ಬಿ ಟಿ ಪರೀಕ್ಷೆಗೆ ಹಾಜರಾದ ನಂತರ ನಿಯಮನುಸಾರ ಶುಲ್ಕದ ಮರುಪಾವತಿ (Refund) ನೀಡಲಾಗುತ್ತದೆ.
ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ:
- ಅರ್ಜಿ ಆರಂಭ :15 ಜುಲೈ 2026.
- ಅರ್ಜಿ ಕೊನೆಯ ದಿನಾಂಕ : 14 ಆಗಸ್ಟ್ 2026
- ಶುಲ್ಕ ಪಾವತಿಯ ಕೊನೆಯ ದಿನಾಂಕ: 16 ಆಗಸ್ಟ್ 2026.
ಸೆಕ್ಷನ್ ಕಂಟ್ರೋಲರ್ ರೈಲ್ವೆ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ :
- ಕಂಪ್ಯೂಟರ್ ಆಧಾರಿತ ಪರೀಕ್ಷೆ( CBT)
- ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ (CBAT)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ A-2( ಮೆಡಿಕಲ್ ಟೆಸ್ಟ್).
ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಪ್ರಮುಖ ಕರ್ತವ್ಯಗಳು :
- ರೈಲುಗಳ ಸಂಚಾರವನ್ನು ನಿಯಂತ್ರಿಸುವುದು
- ರೈಲುಗಳು ಸಮಯಕ್ಕೆ ಸರಿಯಾಗಿ ಓಡಲು ಕ್ರಮ ಕೈಗೊಳ್ಳುವುದು.
- ವಿವಿಧ ನಿಲ್ದಾಣಗಳ ಸ್ಟೇಷನ್ ಮಾಸ್ಟರ್ ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
- ಲೋಕೋ ಪೈಲೆಟ್ ಗಳಿಗೆ ಅಗತ್ಯ ಸೂಚನೆಗಳನ್ನು ನೀಡುವುದು.
- ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು.
- ರೈಲು ಮಾರ್ಗಗಳಲ್ಲಿ ಸಂಚಾರದ ಸುರಕ್ಷತೆ ಕಾಪಾಡುವುದು.
- ಅಪಘಾತ ಅಥವಾ ತಾಂತ್ರಿಕ ದೋಷ ಉಂಟಾದರೆ ರಕ್ಷಣಕಾರ್ಯಗಳನ್ನು ಸಮನ್ವಯಗೊಳಿಸುವುದು.
- ನಿಯಂತ್ರಣ ಕೊಠಡಿ ಇಂದ 24*7 ಕಾರ್ಯಚರಣೆಯನ್ನು ಮೇಲ್ವಿಚಾರಣೆ ಮಾಡುವುದು.
- ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡುವುದು.
ಸೆಕ್ಷನ್ ಕಂಟ್ರೋಲರ್ ರೈಲ್ವೆ ಹುದ್ದೆಗಳ ಕೆಲಸದ ಸ್ವರೂಪ:
- ಶಿಫ್ಟ್ ಡ್ಯೂಟಿ (ಹಗಲು/ ರಾತ್ರಿ).
- ನಿಯಂತ್ರಣ ಕೊಠಡಿಯಲ್ಲಿ ಕಂಪ್ಯೂಟರ್ ಮೂಲಕ ಕಾರ್ಯನಿರ್ವಹಣೆ.
- ಹೆಚ್ಚಿನ ಏಕಾಗ್ರತೆ ಮತ್ತು ತ್ವರಿತ ನಿರ್ಧಾರ ಸಾಮರ್ಥ್ಯ ಅಗತ್ಯ.
- ಉತ್ತಮ ಸಂವಹನ ಕೌಶಲ್ಯ ಅಗತ್ಯ.
ರೈಲ್ವೆ ಸೆಕ್ಷನ್ ಕಂಟ್ರೋಲರ್ ಗಳ ಸೌಲಭ್ಯಗಳು:
- ಕೇಂದ್ರ ಸರ್ಕಾರಿ ನೌಕರರ ಎಲ್ಲಾ ಸೌಲಭ್ಯಗಳು
- ವೈದ್ಯಕೀಯ ಸೌಲಭ್ಯ
- ಪಿಂಚಣಿ (ಅನ್ವಯಿಸುವ ನಿಯಮಗಳಂತೆ)
- ರಜೆ ಸೌಲಭ್ಯ
- ಪದೋನ್ನತಿ ಅವಕಾಶಗಳು
- DA, HRA, TA ಸೌಲಭ್ಯಗಳು.
ಪದೋನ್ನತಿ
ಅನುಭವ ಮತ್ತು ಇಲಾಖಾ ನಿಯಮಗಳ ಆಧಾರದ ಮೇಲೆ ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯಬಹುದು.
ಈ ಹುದ್ದೆ ಭಾರತೀಯ ರೈಲ್ವೆಯ ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಉದ್ಯೋಗಗಳಲ್ಲಿ ಒಂದಾಗಿದ್ದು, ಉತ್ತಮ ವೇತನ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತದೆ.
https://kannadainfo24.com
Read more