ಸರ್ಕಾರವು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 30 ಜಿಲ್ಲೆಗಳಲ್ಲಿ “ಹಗಲು ಯೋಗಕ್ಷೇಮ ಕೇಂದ್ರ ” ಸ್ಥಾಪಿಸಲು ಕ್ರಮ ಕೈಗೊಂಡಿದೆ.
ಕರ್ನಾಟಕ ಸರ್ಕಾರವು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ “ಹಗಲು ಯೋಗಕ್ಷೇಮ ಕೇಂದ್ರ “(Day Care & Wellness Centre) ಗಳನ್ನು ರಾಜ್ಯದ 30 ಜಿಲ್ಲೆಗಳಲ್ಲೂ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಈ ಯೋಜನೆಯ ಉದ್ದೇಶ ಹಗಲು ವೇಳೆಯಲ್ಲಿ ಮನೆಯಲ್ಲೇ ಏಕಾಂಗಿಯಾಗಿ ಇರುವ ಅಥವಾ ಕುಟುಂಬದವರು ನೋಡಿಕೊಳ್ಳಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ಸುರಕ್ಷಿತ,ಆರೋಗ್ಯಕರ ಹಾಗೂ ಸಾಮಾಜಿಕ ವಾತಾವರಣವನ್ನು ಒದಗಿಸುವುದಾಗಿದೆ.
ಹಗಲು ಯೋಗಕ್ಷೇಮ ಕೇಂದ್ರ ಗಳ ಬಗ್ಗೆ ಮುಖ್ಯ ಮಾಹಿತಿ:
- ಫಲಾನುಭವಿಗಳು: 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರು.ಫಲಾನುಭವಿಗಳು:
- ಜಿಲ್ಲೆಗಳು : ರಾಜ್ಯದ 30 ಜಿಲ್ಲೆಗಳು.
- ಪ್ರತಿ ಕೇಂದ್ರದ ಸಾಮರ್ಥ್ಯ : 50 ರಿಂದ 150 ಹಿರಿಯ ನಾಗರಿಕರು.
- ನಿರ್ವಹಣೆ: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಮಾರ್ಗದರ್ಶನದಲ್ಲಿ ಅಗತ್ಯವಿದ್ದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ.
ಹಗಲು ಯೋಗ ಕ್ಷೇಮ ಕೇಂದ್ರ ನಿರ್ಮಾಣಕ್ಕೆಅನುದಾನ ಎಷ್ಟು?
ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ ಪ್ರತಿ ಹಗಲು ಯೋಗಕ್ಷೇಮ ಕೇಂದ್ರಕ್ಕೆ ವಾರ್ಷಿಕ ₹11,20 ಲಕ್ಷ ಅನುದಾನ ನೀಡಲಾಗುತ್ತದೆ.
ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು :
- ದಿನದ ವೇಳೆಯಲ್ಲಿ ಸುರಕ್ಷಿತವಾಗಿ ಸಮಯ ಕಳೆಯುವ ವ್ಯವಸ್ಥೆ.
- ಸಮವಯಸ್ಕರೊಂದಿಗೆ ಮಾತುಕತೆ ಸ್ನೇಹ ಹಾಗೂ ಸಾಮಾಜಿಕ ಚಟುವಟಿಕೆಗಳು.
- ಪುಸ್ತಕ ಓದು ಪತ್ರಿಕೆ ಓದು ಮನನಂದನೆ ಕಾರ್ಯಕ್ರಮಗಳು.
- ಚದುರಂಗ, ಕ್ಯಾರಂ, ಲಘು ಆಟಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು.
- ಯೋಗ ಜ್ಞಾನ ಮತ್ತು ಲಘು ವ್ಯಾಯಾಮ.
- ಆರೋಗ್ಯ ತಪಾಸಣೆ ಹಾಗೂ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಮಾರ್ಗದರ್ಶನ.
- ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು.
- ಮಾನಸಿಕ ಆರೋಗ್ಯ ಮತ್ತು ಒಂಟಿತನ ನಿವಾರಣೆಗೆ ಸಲಹಾ ಸೇವೆಗಳು.
ಹಗಲು ಯೋಗಕ್ಷೇಮ ಕೇಂದ್ರ ಯೋಜನೆ ಯ ಉದ್ದೇಶಗಳು:
- ಹಿರಿಯ ನಾಗರಿಕರಲ್ಲಿ ಒಂಟಿತನ ಕಡಿಮೆ ಮಾಡುವುದು.
- ದೈಹಿಕ ಹಾಗು ಮಾನಸಿಕ ಆರೋಗ್ಯ ಸುಧಾರಿಸುವುದು.
- ಕುಟುಂಬ ಸದಸ್ಯರು ಕೆಲಸಕ್ಕೆ ಹೋದ ಸಮಯದಲ್ಲಿ ಸುರಕ್ಷಿತ ಆರೈಕೆ ಒದಗಿಸುವುದು.
- ಸಮಾಜದೊಂದಿಗೆ ಬೆರೆಯುವ ಅವಕಾಶ ಕಲ್ಪಿಸಿ ಕೊಡುವುದು.
- ಗೌರವಹಿತ ಮತ್ತು ಸಂತೋಷಕರ ವೃದ್ಯಾಪ್ಯಕ್ಕೆ ನೆರವಾಗುವುದು.
ಯಾರಿಗೆ ಹೆಚ್ಚು ಪ್ರಯೋಜನ?
- ಮನೆಯಲ್ಲಿ ಒಬ್ಬರೇ ಇರುವ ಹಿರಿಯ ನಾಗರಿಕರಿಗೆ.
- ಮಕ್ಕಳು ಉದ್ಯೋಗದಲ್ಲಿರುವ ಕುಟುಂಬಗಳ ಹಿರಿಯ ನಾಗರಿಕರಿಗೆ.
- ಆರೋಗ್ಯದ ಸಣ್ಣ ಸಣ್ಣ ಸಮಸ್ಯೆಗಳಿರುವವರಿಗೆ.
- ಸಾಮಾಜಿಕ ಸಂಪರ್ಕ ಬಯಸುವ ಹಿರಿಯ ನಾಗರಿಕರಿಗೆ.
ಎಷ್ಟು ಜಿಲ್ಲೆಗಳಲ್ಲಿ ಹಗಲು ಕ್ಷೇಮ ಕೇಂದ್ರಗಳು?
ರಾಜ್ಯದ 30 ಜಿಲ್ಲೆಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ.
ಯಾವ ಯಾವ ಜಿಲ್ಲೆಗಳು?
ಯೋಜನೆ ಹಳೆಯ 30 ಜಿಲ್ಲಾ ವ್ಯವಸ್ಥೆಯನ್ನು ಆಧರಿಸಿ ಜಾರಿಗೊಂಡಿದ್ದು, ಪ್ರಮುಖ ಜಿಲ್ಲೆಗಳು:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಮೈಸೂರು
- ಮಂಡ್ಯ
- ಹಾಸನ
- ಕೊಡಗು
- ಚಿಕ್ಕಮಗಳೂರು
- ಶಿವಮೊಗ್ಗ
- ದಾವಣಗೆರೆ
- ಚಿತ್ರದುರ್ಗ
- ತುಮಕೂರು
- ಕೋಲಾರ
- ಚಿಕ್ಕಬಳ್ಳಾಪುರ
- ರಾಮನಗರ
- ಬೆಳಗಾವಿ
- ವಿಜಯಪುರ
- ಬಾಗಲಕೋಟೆ
- ಧಾರವಾಡ
- ಗದಗ
- ಹಾವೇರಿ
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಉಡುಪಿ
- ಬಳ್ಳಾರಿ
- ಕೊಪ್ಪಳ
- ರಾಯಚೂರು
- ಕಲಬುರಗಿ
- ಯಾದಗಿರಿ
- ಬೀದರ್
- ಚಾಮರಾಜನಗರ.
ಹಿರಿಯ ನಾಗರಿಕರು ನೋಂದಣಿ ಹೇಗೆ ಮಾಡಿಕೊಳ್ಳಬೇಕು?
- ನಿಮ್ಮ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.ನ
- ವಯಸ್ಸಿನ ದಾಖಲೆ (ಆಧಾರ್/ಜನನ ಪ್ರಮಾಣಪತ್ರ), ವಿಳಾಸ ಪುರಾವೆ ಪಾಸ್ ಪೋರ್ಟ್ ಗಾತ್ರದ ಫೋಟೋ ಸಲ್ಲಿಸಿ.
- ಅರ್ಜಿ ಪರಿಶೀಲನೆಯ ನಂತರ ಸಂಬಂಧಿತ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹೆಸರು ನೋಂದಾಯಿಸಲಾಗುತ್ತದೆ.
- ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಸೇವಾಸಿನ್ನು ಮೂಲಕವೂ ಪಡೆಯಬಹುದು.
ಇತರೆ ಹಿರಿಯ ನಾಗರಿಕರ ಯೋಜನೆಗಳು: ಈ ಕೇಂದ್ರಗಳ ಜೊತೆಗೆ ರಾಜ್ಯದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ, ಹಿರಿಯ ನಾಗರಿಕರ ಗುರುತಿನ ಚೀಟಿ, ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಮತ್ತು ವೃದ್ಧಾಶ್ರಮಗಳಂತಹ ಸೇವೆಗಳೂ ಲಭ್ಯವಿವೆ.
ಒಟ್ಟಾರೆ, ಈ ಹಗಲು ಯೋಗಕ್ಷೇಮ ಕೇಂದ್ರಗಳು ಹಿರಿಯ ನಾಗರಿಕರ ಆರೋಗ್ಯ, ಸುರಕ್ಷತೆ, ಸಾಮಾಜಿಕ ಜೀವನ ಮತ್ತು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲು ರೂಪಿಸಲಾದ ಮಹತ್ವದ ಕಲ್ಯಾಣ ಯೋಜನೆಯಾಗಿದೆ. ಯೋಜನೆಯಿಂದ ಹಿರಿಯ ನಾಗರಿಕರಿಗೆ ತಮ್ಮ ಒಂಟಿತನವನ್ನು ದೂರ ಮಾಡಲು ಹಾಗೂ ಇತರೆ ಎಲ್ಲಾ ವಯಸ್ಕರೊಂದಿಗೆ ಬೆರೆಯುವ ಅವಕಾಶ ಮಾಡಿಕೊಟ್ಟಿದೆ.
ಸರ್ಕಾರವು ಹಿರಿಯ ವಯಸ್ಕರ ಮೇಲು ಕೂಡ ಹಗಲು ಯೋಗಕ್ಷೇಮ ಕೇಂದ್ರ ನಿರ್ಮಾಣ ಮಾಡುವ ತೀರ್ಮಾನದಿಂದ ಜನರು ಬಹಳ ಸಂತಸಪಟ್ಟಿದ್ದಾರೆ.
https://kannadainfo24.com
Read more