(IDBI)ಐಡಿಬಿಐ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ 2026 – ಸಂಪೂರ್ಣ ಮಾಹಿತಿ:
IDBI ಬ್ಯಾಂಕ್ 2026-2027 ನೇ ಸಾಲಿನ ಅಧಿ ಸೂಚನೆಯನ್ನು ಪ್ರಕಟಿಸಿದ್ದು ವಿವಿಧ ವಿಭಾಗಗಳಲ್ಲಿ ಒಟ್ಟು 31 ಸ್ಪೆಷಲಿಸ್ಟ್ ಆಫೀಸರ್ (so) ಹುದ್ದೆಗಳನ್ನು ಬರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳು ಅನುಭವ ಹೊಂದಿರುವ ಅಭ್ಯರ್ಥಿಗಳಿಗಾಗಿ ಪ್ರಕಟವಾಗಿವೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದ ಯಾವುದೇ ಶಾಖೆ ಅಥವಾ ಕಚೇರಿಯಲ್ಲಿ ನೇಮಕಾತಿ ನೀಡಬಹುದು.
IDBI ಬ್ಯಾಂಕಿನ ಒಟ್ಟು ಹುದ್ದೆಗಳು:
- ಹುದ್ದೆಗಳ ವಿವರ – ಒಟ್ಟು 31.
- ಡೆಪ್ಯೂಟಿ ಜನರಲ್ ಮ್ಯಾನೇಜರ್ (Grade
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (Grade C)
- ಮ್ಯಾನೇಜರ್ (Grade B)
IDBI ವಿಭಾಗಗಳು:
- ಆಡಿಟ್ – ಇನ್ಫಾರ್ಮಶನ್ ಸಿಸ್ಟಮ್ (IS)
- ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜರ್ (Premises)
- ಲೀಗಲ್
- ಸೆಕ್ಯೂರಿಟಿ
ಉದ್ಯೋಗ ಸ್ಥಳ
ಭಾರತದ ಎಲ್ಲೆಡೆ (All India Posting)
ಐಡಿಬಿಐ ಬ್ಯಾಂಕ್‌ನಲ್ಲಿ ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಸಾಮಾನ್ಯವಾಗಿ ಈ ಕೆಳಗಿನ ವಿದ್ಯಾರ್ಹತೆಗಳು ಬೇಕಾಗುತ್ತವೆ:
ಹುದ್ದೆಗಳು ಅಗತ್ಯವಿದ್ಯಾರ್ಹತೆ
- ಮ್ಯಾನೇಜರ್ – ಫ್ರಾಡ್ ರಿಸ್ಕ್ = ಪದವಿ + ಹಣಕಾಸು / ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ.
- ಮ್ಯಾನೇಜರ್- ಸೆಕ್ಯೂರಿಟಿ = ಪದವಿ + ಸೇನೆ/ ಪೊಲೀಸ್/ ಅರೆಸೇನಾ ಪಡೆಯ ಅನುಭವ.
- ಮ್ಯಾನೇಜರ್ – ಲೀಗಲ್ = LLB( ಕಾನೂನು ಪದವಿ).
- ಮ್ಯಾನೇಜರ್ – ಐಟಿ = B.E./B.Tech (Computer Science/IT/ECE) ಅಥವಾ MCA.
- ಮ್ಯಾನೇಜರ್ – ಡೇಟಾಬೇಸ್/ ನೆಟ್ವರ್ಕ್ = B.E./B.Tech (IT/CS) ಅಥವಾ MCA.
- ಮ್ಯಾನೇಜರ್ – ರಿಸ್ಕ್ ಮ್ಯಾನೇಜ್ಮೆಂಟ್ =ಪದವಿ/CA/CFA/MBA (Finance).
- ಮ್ಯಾನೇಜರ್ – ಫೈನಾನ್ಸ್ = CA, CMA ಅಥವಾ MBA (Finance).
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) = ಸಂಬಂಧಿತ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಹಾಗೂ ಅನುಭವ.
- ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) = ಸಂಬಂಧಿತ ವಿಷಯದಲ್ಲಿ ಉನ್ನತ ವಿದ್ಯಾರ್ಹತೆ ಹಾಗೂ ಹೆಚ್ಚಿನ ಅನುಭವ.
ಸಾಮಾನ್ಯವಾಗಿ ಅರ್ಹವಾಗಿರುವ ವಿದ್ಯಾರ್ಹತೆಗಳು:
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation).
- ಕೆಲವು ಹುದ್ದೆಗಳಿಗೆ B.E./B.Tech, MCA, MBA, CA, CMA, CFA, LLB ಮುಂತಾದ ವಿಶೇಷ ವಿದ್ಯಾರ್ಹತೆ ಕಡ್ಡಾಯ.
- ಹೆಚ್ಚಿನ SO ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವ ಕೂಡ ಅಗತ್ಯವಾಗಿರುತ್ತದೆ.
IDBI ಬ್ಯಾಂಕಿನ ಹುದ್ದೆಗಳಿಗೆ ವಯೋಮಿತಿ:
ಹುದ್ದೆಯ ಪ್ರಕಾರ ವಯೋಮಿತಿ ಬದಲಾಗುತ್ತದೆ.
- ಮ್ಯಾನೇಜರ್ : ಸುಮಾರು 25 ವರ್ಷದಿಂದ 30 ವರ್ಷ.
- AGM: ಸುಮಾರು 28 ವರ್ಷದಿಂದ 40 ವರ್ಷ.
- DGM: ಸುಮಾರು 35 ವರ್ಷದಿಂದ 45 ವರ್ಷ.
ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಾನುಸಾರ ವಯೋ ಸಡಿಲಿಕೆ ದೊರೆಯುತ್ತದೆ.
ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಕಡ್ಡಾಯ.
IDBI ಬ್ಯಾಂಕಿನ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ:
- ಅರ್ಜಿ ಆರಂಭ: 14 ಜುಲೈ 2026
- ಕೊನೆಯ ದಿನಾಂಕ: 26 ಜುಲೈ 2026
IDBI ಬ್ಯಾಂಕಿನ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಬೇಕಾದ ಅರ್ಜಿ ಶುಲ್ಕ:
- ಸಾಮಾನ್ಯ / OBC / EWS: ₹1050
- SC / ST: ₹250
ಆಯ್ಕೆ ಪ್ರಕ್ರಿಯೆ
- ಅರ್ಜಿಗಳ ಶಾರ್ಟ್‌ಲಿಸ್ಟಿಂಗ್
- ವೈಯಕ್ತಿಕ ಸಂದರ್ಶನ (Interview)
- ಅಗತ್ಯವಿದ್ದರೆ Group Discussion
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
IDBI ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೀಡಲಾಗುವ ವೇತನ :
ಹುದ್ದೆಯ ಗ್ರೇಡ್ ಗೆ ಅನುಗುಣವಾಗಿ ಸುಮಾರು ₹85,000 ರಿಂದ ₹2,00,000+ ಪ್ರತಿ ತಿಂಗಳು (ಮೂಲವೇತನ ಹಾಗೂ ವಿವಿಧ ಸೌಲಭ್ಯಗಳು ಸೇರಿ).
IDBI ಬ್ಯಾಂಕಿನ ಸ್ಪೆಷಲಿಸ್ಟ್ ಆಫೀಸರ್ ಕರ್ತವ್ಯಗಳು:
1. ಇನ್ಫಾರ್ಮಶನ್ ಸಿಸ್ಟಮ್ ಆಡಿಟ್ (Information System Audit):
- ಬ್ಯಾಂಕ್ IT ವ್ಯವಸ್ಥೆಗಳ ಪರಿಶೀಲನೆ
- ಸೈಬರ್ ಭದ್ರತೆ ಮೇಲ್ವಿಚಾರಣೆ.
- ಡೇಟಾ ಸುರಕ್ಷತೆ ಪರಿಶೀಲನೆ
- ಮಾಹಿತಿ ಭದ್ರತಾ ನಿಯಮ ಪಾಲನೆ.
2. ಇನ್ಫಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್ (Infrastructure Management):
- ಬ್ಯಾಂಕ್ ಕಟ್ಟಡಗಳ ನಿರ್ವಹಣೆ
- ಹೊಸ ಶಾಖೆಗಳ ಮೂಲ ಸೌಕರ್ಯ ಅಭಿವೃದ್ಧಿ
- ನಿರ್ವಹಣಾ ಕಾಮಗಾರಿಗಳ ಮೇಲ್ವಿಚಾರಣೆ.
3. ಲೀಗಲ್ ಆಫೀಸರ್ (Legal Officer):
- ಬ್ಯಾಂಕ್ ಕಾನೂನು ಪ್ರಕರಣಗಳನ್ನು ನಿರ್ವಹಿಸುವುದು.
- ಒಪ್ಪಂದಗಳ ಪರಿಶೀಲನೆ.
- ಕಾನೂನು ಸಲಹೆ ನೀಡುವುದು.
- ನ್ಯಾಯಾಲಯದ ವ್ಯವಹಾರಗಳಲ್ಲಿ ಬ್ಯಾಂಕಿಗೆ ಸಹಕಾರ ನೀಡುವುದು.
4. ಸೆಕ್ಯೂರಿಟಿ ಆಫೀಸರ್ (Security Officer):
- ಬ್ಯಾಂಕ್ ಶಾಖೆಗಳ ಭದ್ರತೆ.
- ನಗದು ಸಾಗಣೆ ಸುರಕ್ಷತೆ.
- CCTV ಹಾಗೂ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುವುದು.
- ಭದ್ರತಾ ಸಿಬ್ಬಂದಿಯ ಕಾರ್ಯನಿರ್ವಹಣೆ ಪರಿಶೀಲನೆ ನಡೆಸುವುದು.
IDBI ಬ್ಯಾಂಕಿನ ಸ್ಪೆಷಲಿಸ್ಟ್ ಆಫೀಸರ್ ಉದ್ಯೋಗದ ಪ್ರಯೋಜನಗಳು:
- ಉತ್ತಮ ವೇತನ.
- ಕೇಂದ್ರ ಮಟ್ಟದ ಬ್ಯಾಂಕ್ ಉದ್ಯೋಗ
- DA, HRA, ವೈದ್ಯಕೀಯ ಸೌಲಭ್ಯ
- PF, Gratuity, Leave Travel Concession
ಪದೋನ್ನತಿ ಅವಕಾಶಗಳು
- ಉದ್ಯೋಗ ಭದ್ರತೆ.
- ಭಾರತದಲ್ಲಿ ನಡೆ ಕೆಲಸ ಮಾಡುವ ಅವಕಾಶ.
- ನಿವೃತ್ತಿ ಸೌಲಭ್ಯಗಳು.
ಈ ನೇಮಕಾತಿ ಫ್ರೆಶರ್‌ಗಳಿಗೆ ಅಲ್ಲ. ಬಹುತೇಕ ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನಿಮ್ಮ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಶೀಲಿಸುವುದು ಅಗತ್ಯ.
ಒಟ್ಟಿನಲ್ಲಿ ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರಿಗೆ ಇದು ಒಳ್ಳೆಯ ಉತ್ತಮ ಅವಕಾಶವಾಗಿದೆ. ದಯವಿಟ್ಟು ಅಭ್ಯರ್ಥಿಗಳು ಬೇಗ ಅರ್ಜಿಯನ್ನು ಸಲ್ಲಿಸಿ ತಮ್ಮ ಬ್ಯಾಂಕ್ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ.
https://kannadainfo24.com
Read more