NICL ರಾಷ್ಟ್ರೀಯ ವಿಮಾ ಸಂಸ್ಥೆಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ಅರ್ಜಿ ಆಹ್ವಾನ ವಾಗಿದೆ ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ:
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) 2026ರ Assistant (Class III) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶಾದ್ಯಂತ 500 ಹುದ್ದೆಗಳು ಖಾಲಿ ಇದೆ. ಇದರಲ್ಲಿ ಕರ್ನಾಟಕಕ್ಕೆ 30 ಹುದ್ದೆಗಳು ಮೀಸಲಾಗಿವೆ. ಈ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
NICL ಕಂಪನಿಯ ಪ್ರಮುಖ ಮಾಹಿತಿ :
- ಸಂಸ್ಥೆ: National Insurance Company Limited (NICL)
- ಹುದ್ದೆ: Assistant (Class III)
- ಒಟ್ಟು ಹುದ್ದೆಗಳು: 500
- ಕರ್ನಾಟಕದಲ್ಲಿ: 30 ಹುದ್ದೆಗಳು
- ಸ್ಥಳ: ಭಾರತದಾದ್ಯಂತ
ಸಾಮಾನ್ಯವಾಗಿ ಜನರು ವಿಮೆ ಏಕೆ ಮಾಡಿಸಿಕೊಳ್ಳಬೇಕು ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರ :
- ಕುಟುಂಬಕ್ಕೆ ಆರ್ಥಿಕ ಭದ್ರತೆ:
ವಿಮೆ ಪಡೆದ ವ್ಯಕ್ತಿಯ ಅಕಾಲಿಕ ಮರಣವಾದರೆ, ನಾಮಿನಿಗೆ ವಿಮಾ ಮೊತ್ತ ಸಿಗುತ್ತದೆ. ಇದರಿಂದ ಕುಟುಂಬದ ಖರ್ಚು, ಮಕ್ಕಳ ಶಿಕ್ಷಣ ಮತ್ತು ಸಾಲ ತೀರಿಸಲು ನೆರವಾಗುತ್ತದೆ.
- ಅಪಘಾತ ಕವರ್:
ಕೆಲವು ಪಾಲಿಸಿಗಳಲ್ಲಿ ಅಪಘಾತದಿಂದ ಮರಣ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಹೆಚ್ಚುವರಿ ಪರಿಹಾರ ದೊರೆಯುತ್ತದೆ.
- ಆರೋಗ್ಯ ರಕ್ಷಣೆ (ಕೆಲವು ಯೋಜನೆಗಳಲ್ಲಿ):
ಆಸ್ಪತ್ರೆ ವೆಚ್ಚ ಅಥವಾ ಗಂಭೀರ ಕಾಯಿಲೆಗಳಿಗೆ ಹಣಕಾಸಿನ ನೆರವು ಸಿಗಬಹುದು.
- ಉಳಿತಾಯ ಮತ್ತು ಹೂಡಿಕೆ:
ಕೆಲವು ಜೀವ ವಿಮಾ ಯೋಜನೆಗಳು ಉಳಿತಾಯದ ಜೊತೆಗೆ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಅವಕಾಶ ನೀಡುತ್ತವೆ.
- ತೆರಿಗೆ ಸೌಲಭ್ಯ:
ಭಾರತದ ಆದಾಯ ತೆರಿಗೆ ಕಾಯ್ದೆಯ ಅನ್ವಯ, ಅರ್ಹ ವಿಮಾ ಯೋಜನೆಗಳಿಗೆ ತೆರಿಗೆ ವಿನಾಯಿತಿ ಸಿಗಬಹುದು.
- ಮಾನಸಿಕ ನೆಮ್ಮದಿ:
ಕುಟುಂಬದ ಭವಿಷ್ಯ ಆರ್ಥಿಕವಾಗಿ ಸುರಕ್ಷಿತವಾಗಿದೆ ಎಂಬ ವಿಶ್ವಾಸ ದೊರೆಯುತ್ತದೆ.
ನಮ್ಮ ಕುಟುಂಬದ ಆರ್ಥಿಕ ಭದ್ರತೆ ಮತ್ತು ರಕ್ಷಣೆಯ ಸಲುವಾಗಿ ವಿಮಾ ಕಂಪನಿಗಳು ಹೆಚ್ಚಿನ ಕೆಲಸ ಮಾಡುತ್ತಿರುತ್ತದೆ. ದಯವಿಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ತಮ್ಮ ಅರ್ಜಿ ಸಲ್ಲಿಸಿ ತಮ್ಮ ಇಷ್ಟದ ಕೆಲಸಗಳನ್ನು ಪಡೆದುಕೊಳ್ಳಿ
NICL ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಯಾವಾಗ:
- ಅರ್ಜಿ ಪ್ರಾರಂಭ: 18 /07/ 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: 07 /08/ 2026
- ಪ್ರಿಲಿಮಿನರಿ ಪರೀಕ್ಷಾ ದಿನಾಂಕ :27/8/2026
- ಮುಖ್ಯ ಪರೀಕ್ಷಾ ದಿನಾಂಕ :30/10/2026
- ಅರ್ಜಿ ವಿಧಾನ: ಆನ್ಲೈನ್.
NICL ರಾಷ್ಟ್ರೀಯ ವಿಮಾ ಕಂಪನಿ ಅಸಿಸ್ಟೆಂಟ್ ಹುದ್ದೆಗೆ ಬೇಕಾದ ವಿದ್ಯಾ ಅರ್ಹತೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಆಗಿರಬೇಕು .
- ಅಭ್ಯರ್ಥಿಗೆ ಸ್ಥಳೀಯ ಪ್ರಾದೇಶಿಕ ಭಾಷೆಯ ಜ್ಞಾನ ಇರಬೇಕು.
NICL ಅಸಿಸ್ಟೆಂಟ್ ಹುದ್ದೆಗಳಿಗೆ ಬೇಕಾದ ವಯೋಮಿತಿ:
ಕನಿಷ್ಠ : 21 ವರ್ಷ
ಗರಿಷ್ಠ : 30 ವರ್ಷ
ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಆಗಿರುತ್ತದೆ.
NICL ಅಸಿಸ್ಟೆಂಟ್ ಹುದ್ದೆಗಳಿಗೆ ವೇತನ ಎಷ್ಟು:
ಆರಂಭಿಕ ಒಟ್ಟು ವಾರ್ಷಿಕ ವೇತನ ಸುಮಾರು ₹36,290 ರಿಂದ ₹1,00,865 ರವರೆಗೂ ( ಸ್ಥಳ ಹಾಗೂ ಭತ್ಯೆಗಳ ಆಧಾರದ ಮೇಲೆ ಬದಲಾಗಬಹುದು ).
NICL ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಶುಲ್ಕ ಎಷ್ಟು:
- ಸಾಮಾನ್ಯ/OBC/EWS: ಸುಮಾರು ₹850
- SC/ST/PwBD/ಮಹಿಳಾ ಮೀಸಲು ವರ್ಗಗಳಿಗೆ ಕಡಿಮೆ ಶುಲ್ಕ (ಅಧಿಕೃತ ಅಧಿಸೂಚನೆಯ ಪ್ರಕಾರ).
NICL ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ:
- ಪ್ರಾಥಮಿಕ (Prelims) ಪರೀಕ್ಷೆ
- ಮುಖ್ಯ (Mains) ಪರೀಕ್ಷೆ
- ಪ್ರಾದೇಶಿಕ ಭಾಷಾ ಪರೀಕ್ಷೆ (Regional Language Test).
ಯಾವ ರಾಜ್ಯಗಳಲ್ಲಿ ಹುದ್ದೆಗಳಿವೆ? ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹುದ್ದೆಗಳಿವೆ. ರಾಜ್ಯವಾರು ಹಾಗೂ ವರ್ಗವಾರು ಹುದ್ದೆಗಳ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.
NICL ಅಸಿಸ್ಟೆಂಟ್ ಹುದ್ದೆಗಳಿರುವ ಪ್ರಮುಖ ರಾಜ್ಯಗಳು:
- ಮಹಾರಾಷ್ಟ್ರ
- ತಮಿಳುನಾಡು
- ಪಶ್ಚಿಮ ಬಂಗಾಳ
- ರಾಜಸ್ಥಾನ
- ಕೇರಳ
- ಗುಜರಾತ್
- ಕರ್ನಾಟಕ
- ಉತ್ತರ ಪ್ರದೇಶ
- ದೆಹಲಿ (ಕೇಂದ್ರಾಡಳಿತ ಪ್ರದೇಶ)
- ಅಸ್ಸಾಂ
- ಮಧ್ಯಪ್ರದೇಶ
- ತೆಲಂಗಾಣ
- ಆಂಧ್ರ ಪ್ರದೇಶ
- ಬಿಹಾರ
- ಪಂಜಾಬ್
- ಹರಿಯಾಣ
- ಜಮ್ಮು ಕಾಶ್ಮೀರ
- ಹಿಮಾಚಲ ಪ್ರದೇಶ
- ಗೋವಾ
- ಛತ್ತೀಸ್ಗಡ
- ಮೇಘಾಲಯ
- ಮಿಜೋರಾಮ್
- ನಾಗಾಲ್ಯಾಂಡ್
- ಸಿಕ್ಕಿಂ
- ಅಂಡಮಾನ್- ನಿಕೋಬಾರ್
ಸೇರಿದಂತೆ ಒಟ್ಟು 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ.
NICL ಅಸಿಸ್ಟೆಂಟ್ ಹುದ್ದೆಯ ಕರ್ತವ್ಯಗಳು:
- ವಿಮಾ ಪಾಲಿಸಿಗಳ ನಿರ್ವಹಣೆ.
- ಗ್ರಾಹಕರಿಗೆ ಸೇವೆ ಮತ್ತು ಮಾಹಿತಿ ನೀಡುವುದು.
- ಕ್ಲೈಮ ಆದ ದಾಖಲೆಗಳನ್ನು ಪರಿಶೀಲಿಸುವುದು .
- ಕಚೇರಿ ದಾಖಲೆಗಳು ಹಾಗೂ ಫೈಲ್ಗಳ ನಿರ್ವಹಣೆ.
- ಡೇಟಾ ಎಂಟ್ರಿ ಆಗು ಕಂಪ್ಯೂಟರ್ ಕೆಲಸ.
- ಶಾಖೆಯ ದೈನಂದಿನ ಆಡಳಿತಾತ್ಮಕ ಕೆಲಸಗಳಿಗೆ ಸಹಾಯ ಮಾಡುವುದು.
NICL ಅಸಿಸ್ಟೆಂಟ್ ಈ ಉದ್ಯೋಗದ ಪ್ರಯೋಜನಗಳು:
- ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ.
- ಉತ್ತಮ ವೇತನ ಹಾಗೂ ವಿವಿಧ ಸೌಲಭ್ಯಗಳು.
- ವೈದ್ಯಕೀಯ ಸೌಲಭ್ಯ, ರಜೆ, ಪಿಂಚಣಿ ಮತ್ತು ಎನ್ಪಿಎಸ್ ಸೌಲಭ್ಯ.
- ಬಡ್ತಿ (Promotion) ಅವಕಾಶಗಳು.
- ಉತ್ತಮ ಉದ್ಯೋಗ ಭದ್ರತೆ ಮತ್ತು ವೃತ್ತಿ ಬೆಳವಣಿಗೆ.
ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ವೆಬ್ ಸೈಟ್ ಗೆ ಹೋಗಿ ಚೆಕ್ ಮಾಡಿಕೊಳ್ಳಿ.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸಲು: **NICL Recruitment Portal**
https://kannadainfo24.com
Read more