ಭಾರತದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡ ಅವರ ಧರ್ಮ ಪತ್ನಿ ಇಂದು ನಿಧನ ಹೊಂದಿದ್ದಾರೆ ಇದರ ಬಗ್ಗೆ ಸಂಪೂರ್ಣ ವಿವರ :
ಭಾರತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡ ಅವರ ಧರ್ಮ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು 2026 ಜುಲೈ 18ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 85 ವರ್ಷ ವಯಸ್ಸಿನ ಅವರು ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆ ಮತ್ತು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಜುಲೈ 18ರ ಸಂಜೆ ಸುಮಾರು 4 ಗಂಟೆಗೆ ತೀವ್ರ ಹೃದಯಘಾತದಿಂದಾಗಿ ಅವರು ಕೊನೆಯುಸಿರಎಳೆದರೂ.
ಹಾಸನದ ಒಂದು ಪುಟ್ಟ ಹಳ್ಳಿಯಿಂದ ಆರಂಭವಾಗಿ ದೆಹಲಿಗೆ ಕೆಂಪುಕೋಟೆಯವರೆಗೆ ಬೆಳೆದ ಹೆಚ್. ಡಿ. ದೇವೇಗೌಡ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನದ ಮಹಾ ಪಯಣದಲ್ಲಿ ಶ್ರೀಮತಿ ಚೆನ್ನಮ್ಮ ಅವರು ಕೇವಲ ಪತ್ನಿ ಆಗಿರಲಿಲ್ಲ, ಬದಲಿಗೆ ಅವರ ಅಖಂಡ ಯಶಸ್ಸಿನ ಹಿಂದಿದ್ದ ಅಚರ ಶಕ್ತಿಯಾಗಿದ್ದರು.
ಅವರ ಸುದೀರ್ಘ ಜೀವನದ ಪ್ರಯಾಣ ಹಾಗೂ ದೇವೇಗೌಡ ಅವರಿಗೆ ನೀಡಿದ ಬೆಂಬಲ ಸವಿಸ್ತಾರ ವಿವರ ಇಲ್ಲಿದೆ.
1. ಚೆನ್ನಮ್ಮ ಅವರ ಆರಂಭಿಕ ಜೀವನ ಮತ್ತು ದಾಂಪತ್ಯದ ಆರಂಭ :
ಶ್ರೀಮತಿ ಚೆನ್ನಮ್ಮ ಅವರು ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿ ಗ್ರಾಮದವರು.1954 ರ ಮೇ 25 ರಂದು ಅವರು ಎಚ್. ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಸಮಯದಲ್ಲಿ ದೇವೇಗೌಡರು ಇನ್ನು ರಾಜಕೀಯದಲ್ಲಿ ನೆಲೆ ಕಂಡುಕೊಂಡಿರಲಿಲ್ಲ. ಒಬ್ಬ ಸಾಮಾನ್ಯ ಕೃಷಿಕ ಮತ್ತು ಗುತ್ತಿಗೆದಾರರಾಗಿದ್ದ ದೇವೇಗೌಡರ ಕೈ ಹಿಡಿದ ಚೆನ್ನಮ್ಮ, ಗ್ರಾಮೀಣ ಪರಿಸರದಲ್ಲೇ ತಮ್ಮ ಸಂಸಾರವನ್ನು ಆರಂಭಿಸಿದರು. ದೇವೇಗೌಡ ಅವರ ದಂಪತಿಗೆ ನಾಲ್ವರು ಪುತ್ರರು ಎಚ್. ಡಿ.ರೇವಣ್ಣ, ಎಚ್. ಡಿ.ಕುಮಾರಸ್ವಾಮಿ, ಎಚ್. ಡಿ.ಬಾಲಕೃಷ್ಣ ಗೌಡ, ಎಚ್. ಡಿ. ರಮೇಶ್. ಮತ್ತು ಇಬ್ಬರು ಪುತ್ರಿಯರು ಅನುಸೂಯಾ ಹಾಗೂ ಶೈಲಜಾ ಸೇರಿ ಒಟ್ಟು ಆರು ಜನ ಮಕ್ಕಳಿದ್ದಾರೆ.
2. ದೇವೇಗೌಡರ ಕಠಿಣ ದಿನಗಳಲ್ಲಿ ಬೆನ್ನೆಲುಬಾಗಿ ನಿಂತ ಚೆನ್ನಮ್ಮ ಅವರು :
ಎಚ್. ಡಿ. ದೇವೇಗೌಡರ ರಾಜಕೀಯ ಹಾದಿ ಹೂವಿನ ಆಗಿರಲಿಲ್ಲ. ಹೋರಾಟಗಳ ಮೂಲಕವೇ ಅವರು ಮುಂಚೂಣಿಗೆ ಬಂದವರು.1970 ರ ದಶಕದಲ್ಲಿ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಯ ಪರಿಸ್ಥಿತಿಯ ಸಮಯದಲ್ಲಿ ದೇವೇಗೌಡರು ಜೈಲು ಪಾಲಾಗಿದ್ದರು.
ಆ ಕಟಿಣ ಸಂದರ್ಭದಲ್ಲಿ ಆ ಮನೆಯಲ್ಲಿದ್ದ ಆರು ಮಕ್ಕಳನ್ನು ಸಾಕಿ, ಸಲಹಿ ಅವರಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದ ಸಂಪೂರ್ಣ ಜವಾಬ್ದಾರಿಯನ್ನು ಚೆನ್ನಮ್ಮ ಅವರೊಬ್ಬರೇ ಹೆಗಲ ಮೇಲೆ ಹೊತ್ತರು. ಗಂಡ ಜೈಲಿನಲ್ಲಿದ್ದಾಗ ಧೃತಿಗೆಡದೆ, ಆರ್ಥಿಕ ಮುಗ್ಗಟ್ಟುಗಳ ನಡುವೆಯೂ ಕುಟುಂಬವನ್ನು ಗಟ್ಟಿಯಾಗಿ ಮುನ್ನಡೆಸಿದರು. ದೇವೇಗೌಡರು ಯಾವುದೇ ಆತಂಕವಿಲ್ಲದೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರಲು ಚೆನ್ನಮ್ಮ ಅವರು ನೀಡಿದ ಈ ಕೌಟುಂಬಿಕ ಭದ್ರತೆಯೇ ಮುಖ್ಯ ಕಾರಣವಾಗಿತ್ತು.
3. ಪ್ರಚಾರದಿಂದ ದೂರ ಉಳಿದ ಮೌನಕ್ರಾಂತಿ :
ಸಾಮಾನ್ಯವಾಗಿ ದೇಶದ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯ ಪತ್ನಿಯರು ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಚೆನ್ನಮ್ಮ ಅವರು ತದ್ವಿರುದ್ಧವಾಗಿದ್ದರು. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾದಾಗಲೂ, ತದನಂತರ ಭಾರತದ ಪ್ರಧಾನ ಮಂತ್ರಿಯಾಗಿ ದೆಹಲಿಗೆ ಹೋದಾಗಲೂ ಚೆನ್ನಮ್ಮ ಅವರು ಎಂದಿಗೂ ಅಧಿಕಾರದ ಪ್ರಭಾವಕ್ಕೆ ಒಳಗಾಗಲಿಲ್ಲ.
- ಅವರು ರಾಜಕೀಯದ ವೇದಿಕೆಗಳಿಂದ, ಪ್ರಚಾರದ ಬೆಳಕಿನಿಂದ ಹಾಗೂ ಮಾಧ್ಯಮಗಳಿಂದ ಸದಾ ದೂರ ಉಳಿದರು.
- ಪ್ರಧಾನಿ ನಿವಾಸದಲ್ಲಿದ್ದಾಗಲೂ ಒಬ್ಬ ಸಾಮಾನ್ಯ ಗೃಹಿಣಿಯಂತೆ ಸರಳ ಜೀವನ ನಡೆಸಿದರು.
- ಅವರ ಈ ನಡೆ ದೇವೇಗೌಡರ ರಾಜಕೀಯ ವರ್ಚಸ್ಸಿಗೆ ಮತ್ತು ಗೌರವ ತಂದುಕೊಟ್ಟಿತ್ತು.
ಚೆನ್ನಮ್ಮ ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ನಂಬಿಕೆ :
ಚೆನ್ನಮ್ಮ ಅವರು ತೀವ್ರ ದೈವ ಭಕ್ತರಾಗಿದ್ದರು. ದೇವೇಗೌಡರ ರಾಜಕೀಯ ಏಳುಬೀಳುಗಳಲ್ಲಿ ಮತ್ತು ಕಷ್ಟದ ಸಮಯದಲ್ಲಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಅರಕೆಗಳನ್ನು ಹೊರತ್ತಿದ್ದರು. ಕುಟುಂಬಕ್ಕೆ ಎದುರಾಗುತ್ತಿದ್ದ ವಿಘ್ನಗಳನ್ನು ದೈವ ಬಲದಿಂದ ಎದುರಿಸಬಹುದು ಎಂದು ನಂಬಿದವರು, ಗೌಡರ ಆರೋಗ್ಯ ಮತ್ತು ಯಶಸ್ವಿಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ಹಾಸನದ ಅವರ ಕುಲದೇವತೆ ಹಾಗೂ ಪ್ರಮುಖ ದೇವಾಲಯಗಳಿಗೆ ಅವರು ನಿಯಮಿತವಾಗಿ ಭೇಟಿ ನೀಡುತ್ತಿದ್ದರು.
5. ಚೆನ್ನಮ್ಮ ಅವರು ದೊಡ್ಡ ರಾಜಕೀಯ ಕುಟುಂಬದ ಯಜಮಾನಿ
ಕಾಲಕ್ರಮೇಣ ದೇವೇಗೌಡರ ಕುಟುಂಬ ಕರ್ನಾಟಕದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬಗಳಲ್ಲಿ ಒಂದಾಗಿ ಬೆಳೆಯಿತು. ಹಿರಿಯ ಮಗ ಎಚ್. ಡಿ.ರೇವಣ್ಣ ಸಚಿವರಾದರೆ, ಮತ್ತೊಬ್ಬ ಮಗ ಎಚ್. ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ. ಮೊಮ್ಮಕ್ಕಳಾಗ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ,ಸೂರಜ್ ರೇವಣ್ಣ, ಕೂಡ ರಾಜಕೀಯಕ್ಕೆ ಬಂದರು. ಇಷ್ಟೊಂದು ದೊಡ್ಡ ಕುಟುಂಬವನ್ನು, ಸೊಸೆಯಂದಿರನ್ನು ಹಾಗೂ ಮಕ್ಕಳನ್ನು ಒಟ್ಟಾಗಿ ಹಿಡಿದು ಇಟ್ಟುಕೊಂಡು, ಮನೆಗೆ ಬರುವ ನೂರಾರು ಕಾರ್ಯಕರ್ತರಿಗೆ ಅತಿಥಿ ಸತ್ಕಾರ ಮಾಡುವಲ್ಲಿ ಚೆನ್ನಮ್ಮ ಅವರ ಪಾತ್ರ ಹಿರಿದಾಗಿತ್ತು. ಅವರು ಇಡೀ ಕುಟುಂಬಕ್ಕೆ ಒಬ್ಬ ಮಾರ್ಗದರ್ಶಕ ಯಜಮಾನಿಯಾಗಿದ್ದರು.
ಚೆನ್ನಮ್ಮ ಅವರು ದೇವೇಗೌಡರಿಗೆ ನೀಡಿದ ಬೆಂಬಲದ:
ಹೆಚ್. ಡಿ. ದೇವೇಗೌಡರು ಹಾಸನದಿಂದ ದೆಹಲಿಯವರೆಗಿನ ಹೋರಾಟದ ಆದಿಯಲ್ಲಿ ಯಶಸ್ವಿಯಾಗಲು ಚೆನ್ನಮ್ಮ ಅವರು ನೀಡಿದ ಕೊಡುಗೆಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ದೇವೇಗೌಡರು ತಮ್ಮ 72 ವರ್ಷಗಳ ದಾಂಪತ್ಯ ಜೀವನದಲ್ಲಿ ಚೆನ್ನಮ್ಮ ಅವರನ್ನು ತಮ್ಮ ಬದುಕಿನ ಅತಿ ದೊಡ್ಡ ಶಕ್ತಿ ಎಂದು ಹಲವು ಬಾರಿ ಸ್ಮರಿಸಿದ್ದಾರೆ.
ಸರಳತೆಯ ಸಂಕೇತ :
ಯಾವುದೇ ಹಮ್ಮು ಗಿಮ್ಮು ಇಲ್ಲದ ಅವರ ಸರಳ ನಡೆ ದೇವೇಗೌಡರಿಗೆ ಸಾರ್ವಜನಿಕ ವಲಯದಲ್ಲಿ ಮಣ್ಣಿನ ಮಗ ಎಂಬ ಬಿರುದು ಅನ್ವರ್ಥವಾಗಲು ಪೂರಕವಾಗಿ ನಿಂತಿತು.
ತ್ಯಾಗಮಯಿ ಬದುಕು :
ಗಂಡ ದೇಶದ ಸೇವೆಯಲ್ಲಿ ನಿರತರಾಗಿದ್ದಾಗ ವೈಯಕ್ತಿಕ ಸುಖ ಮತ್ತು ಆಸೆಗಳನ್ನು ತಿಳಿಸಿ ಇಡೀ ಸಂಸಾರವನ್ನು ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮೇಲೆ ಆಸಿಡ್ ಅಟ್ಯಾಕ್:
ಚೆನ್ನಮ್ಮ ಅವರ ಜೀವನದ ಹಾದಿ ಸುಖಕರವಾಗಿರಲಿಲ್ಲ, ಕಾರಣವೇನೆಂದರೆ ಅವರಿಗೆ ದಿನಾಂಕ: 2001ರ ಫೆಬ್ರವರಿ 21ರಂದು ಹಾಸನ ಜಿಲ್ಲೆಯ ಹರದನಹಳ್ಳಿ ಗ್ರಾಮದಲ್ಲಿ ಚೆನ್ನಮ್ಮ ದೇವೇಗೌಡ ಮತ್ತು ಅವರ ಸೊಸೆ ಭವಾನಿ ಅವರ ಮೇಲೆ ಆಸಿಡ್ ದಾಳಿ ನಡೆಯಿತು.
ಏನಾಯಿತು?
ಶಿವರಾತ್ರಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಯೊಬ್ಬ ಆಸಿಡ್ ಎರಚಿದನು. ಚೆನ್ನಮ್ಮ ಅವರಿಗೆ ಸುಮಾರು 30% ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚೇತರಿಸಿಕೊಂಡರು.
ದಾಳಿಯ ಉದ್ದೇಶವೇನು?
ತನಿಖೆಯ ವೇಳೆ ಈ ದಾಳಿಯು ರಾಜಕೀಯ ಕಾರಣಕ್ಕಿಂತ ಕುಟುಂಬದೊಳಗಿನ ವೈಷಮ್ಯ ಮತ್ತು ಆಸ್ತಿ/ಕುಟುಂಬ ಸಂಬಂಧಿತ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದರು. ಪ್ರಕರಣದಲ್ಲಿ ದೇವೇಗೌಡರ ಸಂಬಂಧಿಕನಾದ ಲೋಕೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಆತ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಆ ಕಾಲದ ವರದಿಗಳು ತಿಳಿಸಿವೆ.
ಈ ಘಟನೆ ಆ ಸಮಯದಲ್ಲಿ ದೇಶದಾದ್ಯಂತ ಭಾರೀ ಸಂಚಲನ ಉಂಟುಮಾಡಿತ್ತು. ಕರ್ನಾಟಕ ಸರ್ಕಾರವು ನ್ಯಾಯಾಂಗ ತನಿಖೆ ಹಾಗೂ ವಿಶೇಷ ಪೊಲೀಸ್ ತನಿಖೆಗೆ ಆದೇಶಿಸಿತ್ತು. ಹೀಗೆ ಚೆನ್ನಮ್ಮ ಅವರ ಜೀವನದಲ್ಲಿ ಏರುಪೇರುಗಳನ್ನು ಚೆನ್ನಮ್ಮ ಅವರು ನೋಡಲಾಯಿತು .
ಶ್ರೀಮತಿ ಚೆನ್ನಮ್ಮ ಅವರ ನಿಧನವು ಕೇವಲ ಎಷ್ಟಿದೆ ಎಂದರೆ ಗೌಡರ ಕುಟುಂಬಕ್ಕೆ ಮಾತ್ರವಲ್ಲದೆ ಅವರ ಒಟ್ಟು ರಾಜಕೀಯ ಪ್ರಯಾಣದ ಒಂದು ಸುದೀರ್ಘ ಮತ್ತು ಪ್ರಮುಖ ಅಧ್ಯಾಯದ ಅಂತ್ಯವಾಗಿದೆ. ಧರ್ಮಪತ್ನಿಯಾಗಿ ಅವರು ತೋರಿದ ತಾಳ್ಮೆ ತ್ಯಾಗ ಮತ್ತು ಬೆಂಬಲ ಚೆನ್ನಮ್ಮ ಅವರ ತಾಳ್ಮೆ ಇತಿಹಾಸದಲ್ಲಿ ಸದಾ ಸ್ಮರಣೀಯ.