SSC GD ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಆರಂಭ 2026: ಈ ಹುದ್ದೆಗಳ ಸಂಪೂರ್ಣ ಮಾಹಿತಿ :
ಜುಲೈ 2026ರ ವೇಳೆಗೆ ಹೊಸ SSC GD 2027 ನೇಮಕಾತಿ ಅಧಿಸೂಚನೆಯನ್ನು ಪ್ರಕಟವಾಗಿಲ್ಲ. ಪ್ರಸ್ತುತ 2026ರ ಪರೀಕ್ಷೆ ಪ್ರಕ್ರಿಯೆ (CBT, ಉತ್ತರ ಕಿ ಫಲಿತಾಂಶ ಇತ್ಯಾದಿ ) ನಡೆಯುತ್ತಿದೆ. ಹೊಸ ಅಧಿಸೂಚನೆ ಸಾಮಾನ್ಯವಾಗಿ ನಂತರ ಪ್ರಕಟವಾಗುವ ಸಾಧ್ಯತೆ ಇದೆ.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಎಂದರೇನು?
SSC GD ( Staff Commission general duty constable ) ಪರೀಕ್ಷೆಯ ಮೂಲಕ ಕೆಳಗಿನ ಮಾಡಲಾಗುತ್ತಿದೆ ಕೇಂದ್ರ ಶಶಸ್ತ್ರ ಪಡೆಗಳಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಮುಖ್ಯ ಕೆಲಸಗಳು:
- ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ( BSF)
- ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF)
- ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF)
- ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)
- ಶಶಸ್ತ್ರ ಸೀಮಾ ಬಾಲ್ (SSB)
- ಅಸ್ಸಾಂ ರಿಪ್ಲೇ ( Assam replies- reply man GD)
- ಸೆಕ್ರೆಟರಿ ಸೆಕ್ಯೂರಿಟಿ ಫೋರ್ಸ್ ( SSF)
- ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ( NIA )
ಮುಂತಾದ ಕೆಲಸಗಳು.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಹುದ್ದೆಯ ಮುಖ್ಯ ಕಾರ್ಯಗಳು:
- ಗಡಿ ಭದ್ರತೆ – ದೇಶದ ಗಡಿಗಳನ್ನು ಕಾವಲು ಕಾಯುವುದು ಮತ್ತು ಅಕ್ರಮ ಪ್ರವೇಶವನ್ನು ತಡೆಯುವುದು.
- ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು – ಚುನಾವಣೆ, ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಭದ್ರತೆ ಒದಗಿಸುವುದು.
- VIP/VVIP ಭದ್ರತೆ – ಅಗತ್ಯವಿದ್ದಾಗ ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು.
- ಕೈಗಾರಿಕೆ ಮತ್ತು ಸರ್ಕಾರಿ ಸಂಸ್ಥೆಗಳ ಭದ್ರತೆ – ವಿಮಾನ ನಿಲ್ದಾಣ, ಮೆಟ್ರೋ, ಅಣುಸ್ಥಾವರ, ಸರ್ಕಾರಿ ಕಟ್ಟಡಗಳ ರಕ್ಷಣೆ (ಮುಖ್ಯವಾಗಿ CISF ನಲ್ಲಿ).
- ಭಯೋತ್ಪಾದನೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು.
- ಗಸ್ತು (Patrolling) – ನಿಯೋಜಿತ ಪ್ರದೇಶಗಳಲ್ಲಿ ಹಗಲು-ರಾತ್ರಿ ಗಸ್ತು ತಿರುಗುವುದು.
- ಜನಸಂದಣಿ ನಿಯಂತ್ರಣ – ಪ್ರತಿಭಟನೆ, ರ‍್ಯಾಲಿ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶಾಂತಿ ಕಾಪಾಡುವುದು.
- ವಿಪತ್ತು ನಿರ್ವಹಣೆ – ಪ್ರವಾಹ, ಭೂಕಂಪ, ಚಂಡಮಾರುತ ಮುಂತಾದ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಗಳಲ್ಲಿ ಸಹಕರಿಸುವುದು.
- ಶಸ್ತ್ರಾಸ್ತ್ರಗಳ ನಿರ್ವಹಣೆ ಮತ್ತು ತರಬೇತಿ – ಆಯುಧಗಳನ್ನು ಸುರಕ್ಷಿತವಾಗಿ ಬಳಸುವುದು ಹಾಗೂ ನಿಯಮಿತ ತರಬೇತಿಯಲ್ಲಿ ಭಾಗವಹಿಸುವುದು.
- ದೇಶದ ಆಂತರಿಕ ಭದ್ರತೆಗೆ ಸೇವೆ ಸಲ್ಲಿಸುವುದು – ಅಗತ್ಯವಿದ್ದಾಗ ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ನಿಯೋಜನೆಗೊಳ್ಳುವುದು.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಬೇಕಾದ ವಿದ್ಯಾರ್ಹತೆ :
- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC/ matric ) ಉತ್ತೀರ್ಣ ಆಗಿರಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ದೊಳಗೆ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು.
SSC GD ಬೇಕಾದ ವಯೋಮಿತಿ :
ಕನಿಷ್ಠ – 18 ವರ್ಷ
ಗರಿಷ್ಠ -23 ವರ್ಷ
SSC GD ವಯೋಮಿತಿ ಸಡಿಲಿಕೆ :
- OBC – ಮೂರು ವರ್ಷ
- SC/ST – ಐದು ವರ್ಷ
ಮಾಜಿ ಸೈನಿಕರ ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮ ಅನುಸಾರ ಸಡಿಲಿಕೆ ದೊರೆಯುತ್ತದೆ.
SSC GD ಯಾ ವೇತನ :
- ₹21,700 ರಿಂದ ₹69,100
- DH, HRA, TA
- ವೈದ್ಯಕೀಯ ಸೌಲಭ್ಯ
- ಪಿಂಚಣಿ ( ಅನ್ವಯಿಸುವ ನಿಯಮಗಳಂತೆ )
- ರಜೆ
ಹಾಗೂ ಇತರೆ ಬತ್ಯಗಳು ದೊರೆಯುತ್ತವೆ.
ಒಟ್ಟಾರೆ ಮಾಸಿಕ ಸಂಬಳ ಕೆಲಸದ ಸ್ಥಳವನ್ನು ಅವಲಂಬಿಸಿ ಸುಮಾರು 30,000+40,000 ಆಗಿರಬಹುದು.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ:
ಆಯ್ಕೆಯ ಹಂತಗಳು
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ದೈಹಿಕ ಸಾಮರ್ಥ್ಯ(PET)
- ದೈಹಿಕ ಮಾನದಂಡ ಪರೀಕ್ಷೆ (PSI)
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
SSC GD ಕಂಪ್ಯೂಟರ್ ಪರೀಕ್ಷೆ :
- ಒಟ್ಟು ಪ್ರಶ್ನೆಗಳು-80
- ಅಂಕಗಳು -160
- ಸಮಯ-60 ನಿಮಿಷ
ವಿಷಯಗಳು :
- ಸಾಮಾನ್ಯ ಬುದ್ಧಿ ಜ್ಞಾನ
- ಸಾಮಾನ್ಯ ಜ್ಞಾನ
- ಗಣಿತ
- ಇಂಗ್ಲಿಷ್
- ಹಿಂದಿ
SSC GD ಪರೀಕ್ಷೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ:(PET)
- ಪುರುಷರು: 5 ಕಿಲೋಮೀಟರ್ ಓಟ -24 ನಿಮಿಷ
- ಮಹಿಳೆಯರು :1.6 ಕಿಲೋಮೀಟರ್ ಓಟ -8 ವರೆ ನಿಮಿಷ
ದೈಹಿಕ ಮಾನದಂಡ (PST)
ಎತ್ತರ
- ಪುರುಷ :170 ಸೆಂಟಿಮೀಟರ್
- ಮಹಿಳೆ : 157 ಸೆಂಟಿಮೀಟರ್
ಎದೆ (ಪುರುಷರಿಗೆ)
- ಸಾಮಾನ್ಯ-80 – 85 ಸೆಂಟಿಮೀಟರ್ ( ವಿಸ್ತರಣೆ ಸೇರಿ)
- SC/ST ಹಾಗೂ ಕೆಲವು ಪರ್ವತ ಪ್ರದೇಶದ ಅಭ್ಯರ್ಥಿಗಳಿಗೆ ಸುಲಿಲಿಕ್ಕೆ ಇರುತ್ತದೆ.
SSC GD ಅರ್ಜಿ ಸಲ್ಲಿಸುವುದಕ್ಕೆ ಶುಲ್ಕ :
ಸಾಮಾನ್ಯ: OBC/EWS -₹100 ರೂಪಾಯಿಗಳು
SC/ST ಮಹಿಳೆಯರು ಹಾಗೂ ಮಾಜಿ ಸೈನಿಕರು :
ಶುಲ್ಕ ವಿನಾಯಿತಿ ಅಧಿಸೂಚನೆಯ ಪ್ರಕಾರ.
SSC GD ಅರ್ಜಿ ಸಲ್ಲಿಸುವ ವಿಧಾನ :
- SSC ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ
- ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ
- ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ
- ಅಗತ್ಯವಿದ್ದರೆ ಶುಲ್ಕ ಪಾವತಿಸಿ
- ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
SSC GD ಏರ್ ಫೋರ್ಸ್ ಕಾನ್ಸ್ಟೇಬಲ್ ಕೆಲಸದ ಮುಖ್ಯ ಜವಾಬ್ದಾರಿಗಳು :
- ದೇಶದ ಗಡಿ ಭದ್ರತೆ
- ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ
- ವಿಐಪಿ ಭದ್ರತೆ
- ಗಲಭೆ ನಿಯಂತ್ರಣ
- ಕೈಗಾರಿಕಾ ಸಂಸ್ಥೆಗಳ ರಕ್ಷಣೆ
- ಪ್ರಕೃತಿ ವಿಕೋಪದ ಸಮಯದಲ್ಲಿ ರಕ್ಷಣಾ ಕಾರ್ಯಚರಣೆ ತೊಡಗಿಸಿಕೊಳ್ಳುವುದು.
ರಾಜ್ಯವಾರು ಹುದ್ದೆಗಳು
SSC GD ನೇಮಕಾತಿಯಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ಖಾಲಿ ಹುದ್ದೆಗಳ ಪಟ್ಟಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ. ಜುಲೈ 2026ರ ವೇಳೆಗೆ ಹೊಸ ರಾಜ್ಯವಾರು ಹುದ್ದೆಗಳ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಅಧಿಕೃತ ಅಧಿಸೂಚನೆ ಬಿಡುಗಡೆಯಾದ ನಂತರ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಹುದ್ದೆಗಳ ವಿವರ ಗಳು ಅಧಿಕೃತವಾಗಿ ಪ್ರಕಟವಾಗಲಿದೆ.
SSC GD Constable ಹುದ್ದೆಗಳಿಗೆ ಅಗತ್ಯ ದಾಖಲೆಗಳು:
- SSLC ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ನಿವಾಸ ಪ್ರಮಾಣ ಪತ್ರ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
. ಪದೋನ್ನತಿ ಅವಕಾಶಗಳು
ಅನುಭವ ಮತ್ತು ಇಲಾಖಾ ಪರೀಕ್ಷೆಗಳ ಆಧಾರದ ಮೇಲೆ:
- ಹೆಡ್ ಕಾನ್ಸ್ಟೇಬಲ್
- ASI
- SI
- ಇನ್ಸ್‌ಪೆಕ್ಟರ್
ಹಿರಿಯ ಅಧಿಕಾರಿಗಳ ಹುದ್ದೆಗಳವರೆಗೆ ಬಡ್ತಿ ಪಡೆಯುವ ಅವಕಾಶವಿದೆ.
SSC GD Constable ಹುದ್ದೆಗಳಿಗೆ ಸಿದ್ಧತಾ ಸಲಹೆಗಳು:
- ಪ್ರತಿದಿನ ಗಣಿತ ಅಭ್ಯಾಸ ಮಾಡಿ.
- ಸಾಮಾನ್ಯ ಜ್ಞಾನವನ್ನು ನವೀಕರಿಸಿಕೊಳ್ಳಿ.
- ರೀಸನಿಂಗ್ ಪ್ರಶ್ನೆಗಳನ್ನು ಅಭ್ಯಾಸ ಮಾಡಿ.
- ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ.
- ಪ್ರತಿದಿನ ಓಟ ಮತ್ತು ದೈಹಿಕ ವ್ಯಾಯಾಮ ಮಾಡಿ.
- ಮಾಕ್ ಟೆಸ್ಟ್‌ಗಳನ್ನು ಬರೆಯಿರಿ.
SSC GD ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ 10ನೇ ತರಗತಿ ಅರ್ಹತೆಯ ಉದ್ಯೋಗಗಳಲ್ಲಿ ಒಂದಾಗಿದೆ. ಉತ್ತಮ ಸಂಬಳ, ಉದ್ಯೋಗ ಭದ್ರತೆ, ವೈದ್ಯಕೀಯ ಸೌಲಭ್ಯಗಳು ಮತ್ತು ಪದೋನ್ನತಿ ಅವಕಾಶಗಳಿರುವುದರಿಂದ ಈ ಹುದ್ದೆಗೆ ದೇಶದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಹೊಸ 2027 ಅಧಿಸೂಚನೆ ಪ್ರಕಟವಾದ ತಕ್ಷಣ ರಾಜ್ಯವಾರು ಹುದ್ದೆಗಳು, ಅರ್ಜಿ ದಿನಾಂಕಗಳು ಮತ್ತು ಸಂಪೂರ್ಣ ವಿವರಗಳು ಅಧಿಕೃತವಾಗಿ ಪ್ರಕಟವಾಗಲಿವೆ.
https://kannadainfo24.com
Read more