Telegram Join My Telegram WhatsApp Join My WhatsApp

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಆರಂಭ 2026

ಕರ್ನಾಟಕ ಕಂದಾಯ ಇಲಾಖೆ- ಗ್ರಾಮ ಆಡಳಿತ ಅಧಿಕಾರಿ (VAO) ಗ್ರಾಮ ಲೆಕ್ಕಾಧಿಕಾರಿ 572 ಹುದ್ದೆಗಳ ನೇಮಕಾತಿ 2026

ಕರ್ನಾಟಕದ ಉದ್ಯೋಗ ಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿ ಬಂದಿದೆ. ಕರ್ನಾಟಕದ 22 ಜಿಲ್ಲೆಗಳಲ್ಲಿ ಒಟ್ಟು 572 ಗ್ರಾಮ ಆಡಳಿತಾಧಿಕಾರಿ (village Administrative officer -VAO) ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳಿಂದ ಖಾಲಿ ಹುದ್ದೆಗಳ ಮಾಹಿತಿಯನ್ನು ಸಂಗ್ರಹಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಂಡಿದೆ.

 

ಹುದ್ದೆಯ ಹೆಸರು

  • ಗ್ರಾಮ ಆಡಳಿತಾಧಿಕಾರಿ ( VAO)
  • ಗ್ರಾಮ ಲೆಕ್ಕಾಧಿಕಾರಿ (Village Accountant

 

ಒಟ್ಟು ಹುದ್ದೆಗಳು

  • 572 ಹುದ್ದೆಗಳು
  • ಕರ್ನಾಟಕದ 22 ಜಿಲ್ಲೆಗಳಲ್ಲಿ ನೇಮಕಾತಿ ನಡೆಯಲಿದೆ.

 

(VAO) ಯಾವ ಯಾವ ಗ್ರಾಮಗಳಲ್ಲಿ ಹುದ್ದೆಗಳು ಖಾಲಿ ಇವೆ?

ಪ್ರಸ್ತುತ ಸರ್ಕಾರವು ಒಟ್ಟು 27 ಹುದ್ದೆಗಳ ಬಗ್ಗೆ ಅನುಮೋದನೆ ನೀಡಿದೆ. ಆದರೆ ಗ್ರಾಮ ಅವರು ಹಾಗೂ ಜಿಲ್ಲಾ ವರ ಸಂಪೂರ್ಣ ಹುದ್ದೆಗಳ ಪಟ್ಟಿಯನ್ನು ಇನ್ನು ಅಧಿಕ ಸೂಚನೆಯಲ್ಲಿ ಪ್ರಕಟಿಸಿಲ್ಲ. ಜಿಲ್ಲಾಧಿಕಾರಿಗಳಿಂದ ಖಾಲಿ ಹುದ್ದೆಗಳ ಮಾಹಿತಿ ಸಂಗ್ರಹಿಸಿದ ನಂತರ ಜಿಲ್ಲಾ ವಾರು ಮತ್ತು ತಾಲೂಕು  ಹುದ್ದೆಗಳ ವಿವರ ಪ್ರಕಟವಾಗಲಿದೆ.

(VAO) ಗ್ರಾಮ ಆಡಳಿತ ಅಧಿಕಾರಿಯ ಕೆಲಸ ಏನು?

ಗ್ರಾಮ ಆಡಳಿತಾಧಿಕಾರಿ ಗ್ರಾಮ ಮಟ್ಟದ ಕಂದಾಯ ಇಲಾಖೆಯ ಪ್ರಮುಖ ಅಧಿಕಾರಿ. ಇವರ ಮುಖ್ಯ ಕರ್ತವ್ಯಗಳು.

  • ಭೂ ದಾಖಲೆಗಳ ನಿರ್ವಹಣೆ.
  • ಪಹಣಿ ಆರ್ ಟಿ ಸಿ ದಾಖಲೆಗಳ ಮಾಹಿತಿ ನೀಡುವುದು.
  • ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವರದಿ ಸಲ್ಲಿಸುವುದು.
  • ಬೆಳೆ ಸಮೀಕ್ಷೆ ನಡೆಸುವುದು.
  • ಆದಾಯ ಜಾತಿ ನಿವಾಸ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಮಾಹಿತಿ ನೀಡುವುದು.
  • ಸರ್ಕಾರದ ಭೂಮಿಯ ರಕ್ಷಣೆ ಮತ್ತು ದಾಖಲೆ ನಿರ್ವಹಣೆ.

 

ವಿದ್ಯಾರ್ಹತೆ

ಸಾಮಾನ್ಯವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ

  • ದ್ವಿತೀಯ ಪಿಯುಸಿ (puc/12 ನೇ ತರಗತಿ) ಉತ್ತೀರ್ಣ ಅಥವಾ
  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದ ಸಮಾನ ವಿದ್ಯಾರ್ಹತೆ

ಅಧಿಕೃತ ಅಧಿಸೂಚನೆಯಲ್ಲಿ ಅಂತಿಮ ಅರ್ಹತೆಯನ್ನು ಪ್ರಕಟಿಸಲಾಗಿರವುದು.

ವಯೋಮಿತಿ

  • ಕನಿಷ್ಠ ವಯಸ್ಸು-18 ವರ್ಷ
  • ಗರಿಷ್ಠ ವಯಸ್ಸು-35 ವರ್ಷ

ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ.

  • OBC -3 ವರ್ಷ
  • SC/ST/ ಪ್ರವರ್ಗ -1-5 ವರ್ಷ

ವೇತನ

ಗ್ರಾಮ ಆಡಳಿತಾಧಿಕಾರಿ ಹುದ್ದೆಯು ರಾಜ್ಯ ಸರ್ಕಾರದ ನಿಯಮಿತ ಹುದ್ದೆಯಾಗಿದ್ದು ಸಾಮಾನ್ಯವಾಗಿ:

  • ₹21,400 ರಿಂದ₹42,000+ಮೂಲವೇತನ
  • DA,HRA ಹಾಗೂ ಇತರೆ ಸೌಲಭ್ಯಗಳು

ಸೇರಿಕೊಂಡು ಮಾಸಿಕ ವೇತನ ಹೆಚ್ಚಾಗುತ್ತದೆ, ಅಂತಿಮ ವೇತನ ವಿವರ ಅಧಿಸೂಚನೆಯಲ್ಲಿ ಪ್ರಕಟವಾಗುತ್ತದೆ.

(VAO) ಬೇಕಾಗುವ ದಾಖಲೆಗಳು:

ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಕೆಲವೇ ದಾಖಲೆಗಳು ಅಗತ್ಯ

  • ಎಸ್ ಎಲ್ ಸಿ ಅಂಕಪಟ್ಟಿ
  • ಪಿಯುಸಿ 12ನೇ ತರಗತಿ ಅಂಕಪಟ್ಟಿ
  • ಆಧಾರ್ ಕಾರ್ಡ್
  • ನಿವಾಸ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಸಹಿ
  • ಮೊಬೈಲ್ ಸಂಖ್ಯೆ
  • ಈ ಮೇಲ್ ಐಡಿ

 

ಆಯ್ಕೆ ಪ್ರಕ್ರಿಯೆ

1: ಲಿಖಿತ ಪರೀಕ್ಷೆ

ವಿಷಯಗಳು:

  • ಕನ್ನಡ
  • ಸಾಮಾನ್ಯ ಜ್ಞಾನ
  • ಸಂವಿಧಾನ
  • ಇತಿಹಾಸ
  • ಪ್ರಚಲಿತ ವಿದ್ಯಮಾನಗಳು
  • ಭೂಗೋಳ
  • ಪ್ರಚಲಿತ ವಿದ್ಯಮಾನಗಳು
  • ಕಂದಾಯ ಇಲಾಖೆ ಸಂಬಂಧಿತ ವಿಷಯಗಳು

 

2: ದಾಖಲೆ ಪರಿಶೀಲನೆ

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

 

3:  ಅಂತಿಮ ಆಯ್ಕೆ ಪಟ್ಟಿ

ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕ

ಹಿಂದಿನ ನೇಮಕಾತಿಗಳ ಆಧಾರದ ಮೇಲೆ:

  • ಸಾಮಾನ್ಯ ವರ್ಗ – ಸುಮಾರು ₹600
  • 2A, 2B, 3A, 3B – ಸುಮಾರು ₹300
  • SC/ST/ಪ್ರವರ್ಗ-1 – ಶುಲ್ಕ ವಿನಾಯಿತಿ ಅಥವಾ ಕಡಿಮೆ ಶುಲ್ಕ
  • ಅಧಿಕೃತ ಅಧಿಸೂಚನೆಯಲ್ಲಿ ಅಂತಿಮ ಶುಲ್ಕ ತಿಳಿಸಲಾಗುತ್ತದೆ.

 

ಪ್ರಸ್ತುತ ಆರ್ಥಿಕ ಇಲಾಖೆಯಿಂದ 572 ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರೆತಿದೆ. ಕಂದಾಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದು, ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ. ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಪರೀಕ್ಷೆಗೆ ತಯಾರಿ ಹೇಗೆ?

  • ಕರ್ನಾಟಕ ಇತಿಹಾಸ ಅಧ್ಯಯನ ಮಾಡಿ
  • ಪ್ರಸ್ತುತ ವಿದ್ಯಮಾನಗಳನ್ನು ಓದಿ
  • ಸಂವಿಧಾನದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿ
  • ಗ್ರಾಮ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿ
  • ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
  • ಕನ್ನಡ ವ್ಯಾಕರಣ ಮತ್ತು ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳಿ

ಹುದ್ದೆಯ ವಿಶೇಷತೆಗಳು

  • ಶಾಶ್ವತ ಸರ್ಕಾರಿ ಉದ್ಯೋಗ
  • ರಾಜ್ಯ ಸರ್ಕಾರದ ವೇತನಮಾನ
  • ಪದೋನ್ನತಿ ಅವಕಾಶ
  • ಗ್ರಾಮ ಮಟ್ಟದಲ್ಲಿ ಗೌರವಾನ್ವಿತ ಹುದ್ದೆ
  • ಪಿಂಚಣಿ ಹಾಗೂ ಸರ್ಕಾರಿ ಸೌಲಭ್ಯಗಳು
  • ಕಂದಾಯ ಇಲಾಖೆಯಲ್ಲಿ ಉತ್ತಮ ವೃತ್ತಿಜೀವನ

ಸಾರಾಂಶ

ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಇನ್ನೂ ಜಿಲ್ಲಾವಾರು ಮತ್ತು ಗ್ರಾಮವಾರು ಹುದ್ದೆಗಳ ಅಧಿಕೃತ ಪಟ್ಟಿ ಪ್ರಕಟವಾಗಿಲ್ಲ. ಅಧಿಸೂಚನೆ ಹೊರಬಂದ ನಂತರ ಜಿಲ್ಲೆ, ತಾಲೂಕು ಮತ್ತು ಗ್ರಾಮವಾರು ಖಾಲಿ ಹುದ್ದೆಗಳ ವಿವರ ಲಭ್ಯವಾಗಲಿದೆ. ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ಲಿಖಿತ ಪರೀಕ್ಷೆಗೆ ಸಿದ್ಧತೆ ಆರಂಭಿಸುವುದು ಒಳಿತು.

ಇನ್ನು ಸರ್ಕಾರದಿಂದ ಅಧಿಕೃತವಾಗಿ  ಅರ್ಜಿ ಸಲ್ಲಿಕೆಗೆ   ಅನುಮತಿ ನೀಡಿಲ್ಲ,ದಯವಿಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕವನ್ನು ತಿಳಿದುಕೊಂಡು ಬೇಗ ಅರ್ಜಿ ಸಲ್ಲಿಸಿ ತಮ್ಮಕೆಲಸವನ್ನು ಪಡೆದುಕೊಳ್ಳಿ.

ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯನ್ನು ಬಿಡಲು ಸರ್ಕಾರವು ತೀರ್ಮಾನಿಸಿದೆ. ಗಮನವಿಟ್ಟು ಅರ್ಜಿ ಸಲ್ಲಿಕೆಯ ದಿನಾಂಕವನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ, ತಮ್ಮ ಇಷ್ಟದ ಕೆಲಸವನ್ನು ಪಡೆದುಕೊಳ್ಳಿ.

 

https://kannadainfo24.com

Read More

 

 

Leave a Comment