Home guard ತುಮಕೂರು ಜಿಲ್ಲೆಯಲ್ಲಿ ಗೃಹರಕ್ಷಕದಳ ನೇಮಕಾತಿ ಅರ್ಜಿ ಸಲ್ಲಿಕೆ ಆರಂಭ 2026.
ತುಮಕೂರು ಜಿಲ್ಲೆಯಲ್ಲಿ ಗೃಹರಕ್ಷಕ ದಳ (home guards) ನೇಮಕಾತಿಗೆ ಅರ್ಜಿ ಆಹ್ವಾನವಾಗಿದ್ದು, ಸರ್ಕಾರಿ ಸೇವೆಯಲ್ಲಿ ಸಮಾಜ ಸೇವೆಯ ಮನೋಭಾವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಕರ್ನಾಟಕ ಗೃಹರಕ್ಷಕ ದಳವು ಪೊಲೀಸ್ ಇಲಾಖೆ ಜಿಲ್ಲಾ ಆಡಳಿತ ಮತ್ತು 20 ನಿರ್ವಹಣಾ ಕಾರ್ಯಗಳಲ್ಲಿ ಸಹಕರಿಸುವ ಸ್ವಯಂಸೇವಕ ಭದ್ರತಾ ಪಡೆ ಆಗಲಿದೆ.
Home guard ಗೃಹರಕ್ಷಕ ದಳ ನೇಮಕಾತಿ ಅರ್ಜಿ ಸಲ್ಲಿಕೆ ತುಮಕೂರಿನಲ್ಲಿ ಆಯ್ಕೆ ಪ್ರಕ್ರಿಯೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ
- ಕನಿಷ್ಠ :19 ವರ್ಷ
- ಗರಿಷ್ಠ : 50 ವರ್ಷ ನಿಗದಿಪಡಿಸಲಾಗಿದೆ.
Home guard ಗೆ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಕಚೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿ ನಮೂನೆಯನ್ನು ಪಡೆದ ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು.
Home guard ಕೆಲಸಕ್ಕೆ ತುಮಕೂರಿನಲ್ಲಿ ಹುದ್ದೆಗಳಿರುವ ಜಾಗ:
- ತುಮಕೂರು
- ತಿಪಟೂರು
- ಮಧುಗಿರಿ
- ಶಿರಾ
- ಕುಣಿಗಲ್
- ಗುಬ್ಬಿ
- ಪಾವಗಡ
- ಕೊರಟಗೆರೆ
- ತುರುವೇಕೆರೆ
- ಚಿಕ್ಕನಾಯಕನಹಳ್ಳಿ.
ಇನ್ನು ಕೆಲವು ಮುಂತಾದ ಶಾಖೆಗಳಲ್ಲಿ ವಿಚಾರಿಸಿಕೊಳ್ಳಿ, ಅರ್ಜಿಯನ್ನು ಸಲ್ಲಿಸಿ.
: ಸಲ್ಲಿಸುವ ವಿಳಾಸ :
- : ಜಿಲ್ಲಾ ಗೃಹ ರಕ್ಷಕ ದಳದ ಕಚೇರಿ,ಅರ್ಜಿ
- ಬಟವಾಡಿ ತುಮಕೂರು ( ಅಗ್ನಿಶಾಮಕ ಠಾಣೆ ಹತ್ತಿರ ).
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಹುದ್ದೆಯ ಹೆಸರು
ಗೃಹ ರಕ್ಷಕ – ಗೃಹರಕ್ಷಕಿಯರು
ಹುದ್ದೆಗಳ ಸಂಖ್ಯೆ
234 ಹುದ್ದೆಗಳ ಅರ್ಜಿಗೆ ನೇಮಕಾತಿ ಮಾಡಲಾಗಿದೆ.
- ಪುರುಷ ಗೃಹರಕ್ಷಕ -180 ಹುದ್ದೆಗಳು
- ಗೃಹರಕ್ಷಕಿಯರು -54 ಹುದ್ದೆಗಳು ಖಾಲಿ ಇವೆ.
ಉದ್ಯೋಸ್ಥಳ ತುಮಕೂರು ಜಿಲ್ಲೆ.
ವಿದ್ಯಾರ್ಹತೆ
10ನೇ ತರಗತಿ ಉತ್ತೀರ್ಣ ಆಗಿರಬೇಕು.
ಅರ್ಜಿ ಸಲ್ಲಿಸುವ ದಿನಾಂಕ:
- ಕಚೇರಿಯಿಂದ ಅರ್ಜಿ ಪಡೆಯಲು ಪ್ರಾರಂಭದ ದಿನಾಂಕ:18/06/2026
- ಕಚೇರಿಯಿಂದ ಅರ್ಜಿ ಪಡೆಯಲು ಕೊನೆಯ ದಿನಾಂಕ :25/06/2026
- ಭರ್ತಿ ಮಾಡಿದ್ದ ಅರ್ಜಿಯನ್ನು ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ :30/06/2026.
ಆಯ್ಕೆ ಪ್ರಕ್ರಿಯೆ
- ಅರ್ಜಿಗಳ ಪರಿಶೀಲನೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆಯಾದ ಪಟ್ಟಿಯ ಆಧಾರದ ಮೇಲೆ
ಕೆಲವು ಸಂದರ್ಭಗಳಲ್ಲಿ ಲಿಖಿತ ಪರೀಕ್ಷೆ ಇಲ್ಲದೆ ದೈಹಿಕ ಸಾಮರ್ಥ್ಯ ಮತ್ತು ದಾಖಲೆ ಪರಿಶೀಲನೆ ಆದರದ ಮೇಲೆ ಕೂಡ ಆಯ್ಕೆ ನಡೆಯಬಹುದು.
ದೈಹಿಕ ಅರ್ಹತೆ:
ಅಭ್ಯರ್ಥಿಗಳು ಉತ್ತಮ ಆರೋಗ್ಯ ಹೊಂದಿರಬೇಕು. ಓಟ,ದೈಹಿಕ ಕ್ಷಮಾತೆ ಮತ್ತು ಶಿಸ್ತು ಪ್ರಮುಖ ಮಾನದಂಡಗಳಾಗಿವೆ. ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು ಶಾರಿರಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥ ಆಗಿರಬೇಕು.
ವೇತನ ಮತ್ತು ಬತ್ಯೆ
ಗ್ರಹ ರಕ್ಷಕರು ಸಾಮಾನ್ಯ ಸರ್ಕಾರಿ ನೌಕರರಂತೆ ಸ್ಥಿರ ಮಾಸಿಕ ವೇತನ ಪಡೆಯುವುದಿಲ್ಲ. ಕರ್ತವ್ಯಕ್ಕೆ ಹಾಜರಾಗುವ ದಿನಗಳ ಆಧಾರದ ಮೇಲೆ ಬತ್ಯೆ ನೀಡಲಾಗುತ್ತದೆ ಕರ್ನಾಟಕದಲ್ಲಿ ಕೆಲವು ಕರ್ತವ್ಯಗಳಿಗೆ ದಿನಕ್ಕೆ ₹500 ರಿಂದ ₹800 ರವರೆಗೆ ಬತ್ಯೇ ನೀಡಲಾಗುತ್ತಿದೆ.
Home guard ಕರ್ತವ್ಯಗಳು:
- ಸಂಚಾರ ನಿಯಂತ್ರಣ
- ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಭದ್ರತೆ
- ಚುನಾವಣೆ ಕರ್ತವ್ಯ
- ವಿಪತ್ತು ನಿರ್ವಹಣೆ
- ಪೊಲೀಸ್ ಇಲಾಖೆಗೆ ಸಹಾಯ
- ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶಿಸ್ತು ಕಾಪಾಡುವುದು
- ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯ
Home guard ಕೆಲಸಕ್ಕೆ ಬೇಕಾಗುವ ದಾಖಲೆಗಳು:
ಅರ್ಜಿಯೊಂದಿಗೆ ಸಾಮಾನ್ಯವಾಗಿ ಕೆಳಗಿನ ದಾಖಲೆಗಳು ಅಗತ್ಯವಾಗಬಹುದು:
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
- ಮೊಬೈಲ್ ಸಂಖ್ಯೆ
- ಗುರುತಿನ ಚೀಟಿ
ತರಬೇತಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಗೃಹರಕ್ಷಕ ದಳದ ಮೂಲಭೂತ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ:
- ಶಿಸ್ತು
- ಪೆರೇಡ್
- ತುರ್ತು ರಕ್ಷಣಾ ಕಾರ್ಯ
- ಸಂಚಾರ ನಿಯಂತ್ರಣ
- ವಿಪತ್ತು ನಿರ್ವಹಣೆ
- ಸಾರ್ವಜನಿಕ ಸುರಕ್ಷತೆ
ಇತ್ಯಾದಿ ವಿಷಯಗಳನ್ನು ಕಲಿಸಲಾಗುತ್ತದೆ.
Home guard ಉದ್ಯೋಗದ ಪ್ರಯೋಜನಗಳು:
- ಸರ್ಕಾರಿ ಇಲಾಖೆಗಳೊಂದಿಗೆ ಕೆಲಸ ಮಾಡುವ ಅವಕಾಶ.
- ಸಮಾಜ ಸೇವೆ ಮಾಡುವ ಅವಕಾಶ.
- ಭದ್ರತಾ ಕ್ಷೇತ್ರದಲ್ಲಿ ಅನುಭವ.
- ಪೊಲೀಸ್ ಮತ್ತು ಇತರ ಭದ್ರತಾ ಸೇವೆಗಳ ನೇಮಕಾತಿಯಲ್ಲಿ ಅನುಭವದ ಲಾಭ.
- ಸಾರ್ವಜನಿಕರೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ ಅಭಿವೃದ್ಧಿ.
ತುಮಕೂರು ಅಭ್ಯರ್ಥಿಗಳಿಗೆ ಸಲಹೆಗಳು
ಎಲ್ಲಾ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಿ.
- ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡಿ.
- ಅಧಿಕೃತ ಪ್ರಕಟಣೆಯಲ್ಲಿರುವ ಸೂಚನೆಗಳನ್ನು ಗಮನದಿಂದ ಓದಿ.
- ಅರ್ಜಿಯನ್ನು ಕೊನೆಯ ದಿನಾಂಕಕ್ಕೂ ಮುನ್ನ ಸಲ್ಲಿಸಿ.
- ದಾಖಲೆ ಪರಿಶೀಲನೆಗೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ.
ಗೃಹರಕ್ಷಕ ದಳವು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯ ಒಂದು ಅವಕಾಶವೂ ಹೌದು. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಈ ಹುದ್ದೆ ಯುವಕರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ. 10ನೇ ತರಗತಿ ಪಾಸ್ ಮಾಡಿದ ಅಭ್ಯರ್ಥಿಗಳಿಗೂ ಅವಕಾಶ ಇರುವುದರಿಂದ ತುಮಕೂರು ಜಿಲ್ಲೆಯ ಯುವಕರು ಈ ನೇಮಕಾತಿಯನ್ನು ಸದುಪಯೋಗಪಡಿಸಿಕೊಳ್ಳಬಹುದು. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಸುರಕ್ಷತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ತಮ್ಮ ಕೊಡುಗೆ ನೀಡಬಹುದು.
https://kannadainfo24.com ✅✅👇👇👇✅✅
Read more